ಮಂಗಳೂರು: ಹೋಮಿಯೋಪತಿ ಶಿಕ್ಷಣದ ಜೊತೆ ಪೌರೋಹಿತ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಯುವಕನಿಗೆ ಆನ್‌ಲೈನ್ ನಲ್ಲಿ 31.99 ಲಕ್ಷ ರೂ. ವಂಚನೆಗೈದ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಟ್ಸಪ್‌ನಲ್ಲಿ ಬಂದ ಸಂದೇಶವನ್ನು ಗಮನಿಸಿದ ತಾನು ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದು ಎಂಬ ಆಸೆಯಿಂದ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗಳಿಗೆ ನ.5ರಿಂದ 26ರ ವರೆಗೆ ತನ್ನಲ್ಲಿದ್ದ ಹಣ ಹಾಗೂ ಮನೆಯಲ್ಲಿದ್ದ ಬಂಗಾರನ್ನು ಅಡವಿಟ್ಟು ಹಂತ ಹಂತವಾಗಿ 31.99ಲಕ್ಷ ರೂ. ವರ್ಗಾಯಿಸಿದ್ದೆ. ಬಳಿಕ ಹೂಡಿಕೆ ಮಾಡಿದ ಹಣವನ್ನು ವಾಪಸ್ ನೀಡುವಂತೆ ಕೇಳಿಕೊಂಡಾಗ ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಹೇಳಿದ್ದಲ್ಲದೆ ತೆರಿಗೆ ಮತ್ತಿತರ ಶುಲ್ಕಗಳನ್ನು ಪಾವತಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಹಣ ಹಿಂಪಡೆಯಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ವಿದ್ಯಾರ್ಥಿ ತಿಳಿಸಿದ್ದಾರೆ.
ಬಳಿಕ ಮನೆಯವರು ಹಾಗೂ ಸ್ನೇಹಿತರಲ್ಲಿ ಈ ವಿಷಯ ಹೇಳಿದಾಗ ತಾನು ಮೋಸ ಹೋಗಿರುವುದಾಗಿ ಗಮನಕ್ಕೆ ಬಂತು ಎಂದು ಹಣ ಕಳಕೊಂಡ ವಿದ್ಯಾರ್ಥಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



