Home Crime ಮಂಗಳೂರು: ಮಾದಕವಸ್ತು ಸೇವನೆ ಆರೋಪ : 6 ಮಂದಿಯ ಬಂಧನ…!!

ಮಂಗಳೂರು: ಮಾದಕವಸ್ತು ಸೇವನೆ ಆರೋಪ : 6 ಮಂದಿಯ ಬಂಧನ…!!

ಮಂಗಳೂರು: ಮಾದಕವಸ್ತು ಸೇವನೆ ಮಾಡಿರುವ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಮೂಲದ 6 ಮಂದಿ ಯುವಕರನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಜಮ್ಮು ಮತ್ತು ಕಾಶ್ಮೀರದ ಕುಪ್‌ವಾರ ಜಿಲ್ಲೆಯ ನಿವಾಸಿಗಳಾದ ಜುನೈದ್ ಅಹ್ಮದ್ ಗುಜ್ಜರ್ (19), ಅಬೀದ್ ಗೋಜಾ‌ರ್ ಕೋಂಶಿ (21), ಸಜದ್ ಅಹ್ಮದ್ ಕಟಾರಿಯಾ (23), ಮೋಕ್ ಮಲ್ಲಿ ಕೋಂಶಿ (19), ಇಸ್ತಾಯಾಕ್ ಅಹಖಾನ್ (21) ಮತ್ತು ಜಹಾನ್ ಜರ್ ಅಹ್ಮದ್ ತಾಸ್ (29) ಎಂದು ಗುರುತಿಸಲಾಗಿದೆ.

ಮಂಗಳವಾರ ಸಂಜೆ ಠಾಣಾ ಸಿಬ್ಬಂದಿ ಶೀತಲ್ ಅಲಗೂರು ಗಸ್ತು ನಿರತರಾಗಿದ್ದ ಬಂದರು ಹೊಟೇಲ್ ಬಳಿ ಆರು ಮಂದಿ ಯುವಕರು ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಬಳಿಕ ಅವರನ್ನು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಮಾದಕ ದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.