Home Crime ಬಂಟ್ವಾಳ: ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣ : 14ನೇ ಆರೋಪಿಗೆ ಜಾಮೀನು ಮಂಜೂರು…!!

ಬಂಟ್ವಾಳ: ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣ : 14ನೇ ಆರೋಪಿಗೆ ಜಾಮೀನು ಮಂಜೂರು…!!

ಬಂಟ್ವಾಳ: ಅಬ್ದುಲ್‌ ರಹಿಮಾನ್‌ ಕೊಲೆ ಪ್ರಕರಣ ಮತ್ತು ಕಲಂದರ್ ಶಾಫಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿಯಲ್ಲಿ ಬಂಧಿತನಾಗಿದ್ದ 14ನೇ ಆರೋಪಿ ಶೃಂಗೇರಿ ನಿವಾಸಿ ರವಿ ಸಂಜಯ್ ಎಂಬಾತನಿಗೆ ಮಂಗಳೂರು 2ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ಜಾಮೀನು ಮಂಜೂರುಗೊಂಡಿದೆ.

ರವಿ ಸಂಜಯ್ 1ನೇ ಮತ್ತು 3ನೇ ಆರೋಪಿಗಳಿಗೆ ಆಶ್ರಯ ನೀಡಿ, ಸಾಕ್ಷ್ಯ ನಾಶಪಡಿಸಲು ಸಹಾಯ ಮಾಡಿದ್ದಾನೆಂದು ಆರೋಪಿಸಲಾಗಿತ್ತು.

ಕಟ್ಟಡದ ಕೆಲಸಕ್ಕೆ ತುರ್ತಾಗಿ ಒಂದು ಲೋಡ್ ಮರಳು ತರುವಂತೆ ಅಬ್ದುಲ್ ರಹಿಮಾನ್‌ಗೆ ದೀಪಕ್ ಕರೆ ಮಾಡಿದ್ದ. ಮರಳನ್ನು ಪಿಕಪ್ ವಾಹನದಲ್ಲಿ ತಂದು ಇಳಿಸುವಾಗ ಅಬ್ದುಲ್ ರಹಿಮಾನ್ ಮೇಲೆ ಹಲ್ಲೆ ನಡೆದಿತ್ತು. ಬೈಕಿನಲ್ಲಿ ಬಂದ ಇಬ್ಬರು ತಲವಾರಿನಿಂದ ಹತ್ಯೆ ನಡೆಸಿ, ಕಲಂದರ್‌ ಎಂಬಾತನಿಗೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ವಕೀಲರಾದ ಕಿಶೋರ್‌ ಕುಮಾರ್‌ ಅವರು ಆರೋಪಿ ಪರ ವಾದ ಮಂಡಿಸಿದರು.