ವಿಟ್ಲ: ಅನ್ಯಕೋಮಿನ ಯುವಕನೊಬ್ಬ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ವಿಟ್ಲ ಉರಿಮಜಲು ಎಂಬಲ್ಲಿ ನಡೆದಿದೆ.
ಹಲ್ಲೆಗೈದ ಆರೋಪಿಯನ್ನು ಕೋಲ್ಪೆ ನಿವಾಸಿ ಸುಲೈಮಾನ್ ರವರ ಪುತ್ರ ಇರ್ಷಾದ್ ಎಂದು ಗುರುತಿಸಲಾಗಿದೆ.
ಉರಿಮಜಲು ನಿವಾಸಿ ಗಣೇಶ್ ಎಂಬವರು ತಮ್ಮ ಮನೆಯ ಬಳಿ ನಿಂತಿರುವಾಗ ಅನ್ಯಕೋಮಿನ ಪರಿಚಯದ ಯುವಕನೊಬ್ಬ ಅಲ್ಲೇ ನಿಂತಿದ್ದ. ಸುಮಾರು ಹೊತ್ತು ಆ ಯುವಕನ ಚಲನ ವಲನ ವೀಕ್ಷಿಸಿದ ಬಳಿಕ ಗಣೇಶ್ ಎಂಬವರು ಆತನಲ್ಲಿ ಏನು ಇಲ್ಲಿ ನಿಂತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ ಆತ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ, ಗಣೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಗಣೇಶ್ ಅವರ ಪತ್ನಿ ಅಲ್ಲಿಗೆ ಧಾವಿಸಿ ಹಲ್ಲೆಯಿಂದ ಬಿಡಿಸಿ ಹಲ್ಲೆಗೊಳಗಾದ ತನ್ನ ಗಂಡ ಗಣೇಶ್ ರವರನ್ನು ಚಿಕಿತ್ಸೆಗಾಗಿ ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕೋಲ್ಪೆ ನಿವಾಸಿ ಇರ್ಷಾದ್ ನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.



