Home Crime ಮಣಿಪಾಲ : ಅಂದರ್ ಬಾಹರ್ ಇಸ್ಪೀಟು ಆಟ : 8 ಮಂದಿ‌ ಅರೆಸ್ಟ್…!!

ಮಣಿಪಾಲ : ಅಂದರ್ ಬಾಹರ್ ಇಸ್ಪೀಟು ಆಟ : 8 ಮಂದಿ‌ ಅರೆಸ್ಟ್…!!

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪದ ಮನೋಳಿ ಗುಜ್ಜಿ ಮನೆಯೊಂದರಲ್ಲಿ ಅಂದರ್ ಬಾಹರ್ ಇಸ್ಪೀಟು ಆಟ ಆಡುತ್ತಿರುವ ಮಾಹಿತಿ ಮೇರೆಗೆ ಪೊಲೀಸರು ದಾಳಿ‌ನಡೆಸಿ 8 ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರು ನವೀನ್‌ (37), 2) ಭಾಸ್ಕರ್‌ (55) 3) ಕೃಷ್ಣ (27), 4) ಜಗದೀಶ, 5) ಸಂತೋಷ್‌ (42), 6) ಶಂಕರ ಪೂಜಾರಿ (42), 7) ಮಂಜುನಾಥ್‌ (37) 8) ಶಿವಯ್ಯ (36) ಎಂದು ತಿಳಿಯಲಾಗಿದೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳು ಜೂಜಾಟ ಆಡಲು ಬಳಸಿದ್ದ ಸೊತ್ತುಗಳನ್ನು‌ ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಅನೀಲ್‌ ಎಮ್‌.ಡಿ ಪೊಲೀಸ್ ಉಪ-ನಿರೀಕ್ಷಕರು ಮಣಿಪಾಲ ಪೊಲೀಸ್ ಠಾಣೆ ಇವರಿಗೆ ದಿನಾಂಕ 15/11/2025 ರಂದು 18:30 ಗಂಟೆಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಮಾನ್ಯ ಉಡುಪಿ ಪೊಲೀಸ್‌ ಉಪಾಧೀಕ್ಷಕರಿಂದ ಶೋದನಾ ಆದೇಶ ಪಡಕೊಂಡು 20:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮನೋಳಿ ಗುಜ್ಜಿ ಬೆಟ್ಟು ಅಂಚೆಯ ಮನೆ ನಂ:5/77ನೇ ಪೂಜಾ ನಿಲಯ ಶ್ರೀಮತಿ ಬಾಬಿ ಪೂಜಾರ್ತಿ ಮನೆಯ ಹಾಲ್‌ನಲ್ಲಿ ಅಂದರ್‌ ಬಾಹರ್‌ ಇಸ್ಪೀಟ್‌ ಜೂಜಾಟ ಆಡುತ್ತಿದ್ದ 1) ನವೀನ್‌ (37), 2) ಭಾಸ್ಕರ್‌ (55) 3) ಕೃಷ್ಣ (27), 4) ಜಗದೀಶ, 5) ಸಂತೋಷ್‌ (42), 6) ಶಂಕರ ಪೂಜಾರಿ (42), 7) ಮಂಜುನಾಥ್‌ (37) 8) ಶಿವಯ್ಯ (36) ಇವನರನ್ನು ಹಾಗೂ ಜೂಜಾಟಕ್ಕೆ ಬಳಸಿದ 1,02,060/-ರೂ 52 ಇಸ್ಪೀಟ್‌ ಎಲೆಗಳು, 7 ಮೊಬೈಲ್‌ ಫೋನ್‌ಗಳು, ಕಂದು ಕಪ್ಪು ಡಿಸೈನ್‌ ಇರುವ ಬೆಡ್‌ಶೀಟ್‌-1 ಹಾಗೂ 2 ಮೋಟಾರು ಸೈಕಲ್‌ ಹಾಗೂ 1 ಕಾರನ್ನು ಸ್ವಾಧೀನಪಡಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 79/2023 ಕಲಂ: 80 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.