Home Crime ಪೊಲೀಸರಿಂದ ಶಾಲಾ ವಾಹನಗಳ ಪರಿಶೀಲನೆ : 282 ಪ್ರಕರಣ ದಾಖಲು…!!

ಪೊಲೀಸರಿಂದ ಶಾಲಾ ವಾಹನಗಳ ಪರಿಶೀಲನೆ : 282 ಪ್ರಕರಣ ದಾಖಲು…!!

ಉಡುಪಿ : ನಗರದಲ್ಲಿ ಶಾಲಾ ವಾಹನಗಳು ಅಜಾಗರೂಕತೆಯಿಂದ ಮತ್ತು ನಿರ್ಲಕ್ಷತನದಿಂದ ಚಲಾಯಿಸುತ್ತಿರುವ ದೂರಿನ ಮೇರೆಗೆ ಉಡುಪಿ ಪೊಲೀಸ್ ಇಲಾಖೆ ಹೆಚ್ಚಿನ ಎಲ್ಲಾ ವಾಹನಗಳನ್ನು ಪರಿಶೀಲಿಸಿ, ಒಟ್ಟು 282 ವಾಹನಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣ ಸಾರಾಂಶ :

ಇತ್ತೀಚಿನ ದಿನಗಳಲ್ಲಿ ಶಾಲಾ ವಾಹನಗಳು ಅಜಾಗರುಕತೆ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ರಿರುವ ಬಗ್ಗೆ ತಿಳಿದು ಬಂದಿದ್ದು, ಮಕ್ಕಳ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ದಿನಾಂಕ 19/06/2025ರಂದು ಬೆಳಿಗ್ಗೆ 07:00 ಗಂಟೆಯಿಂದ 12 ಗಂಟೆಯ ವರೆಗೆ ವಿಶೇಷ ತಪಾಷಣಾ ಡ್ರೈವ್‌ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಠಾಣಾ ವ್ಯಾಪಿಯಲ್ಲಿ ಶಾಲಾ ವಾಹನಗಳನ್ನು ಕಟ್ಟು ನಿಟ್ಟಾಗಿ ಪರಿಶೀಲಿಸಲಾಗಿರುತ್ತದೆ. ಈ ವಿಶೇಷ ತಪಾಷಣಾ ಡ್ರೈವ್‌ನಲ್ಲಿ ಸುಮಾರು 930 ವಾಹನಗಳನ್ನು ತಪಾಸಣೆ ನಡೆಲಾಗಿರುತ್ತದೆ. ಒಟ್ಟು 282 ಪ್ರಕರಣಗಳನ್ನು ದಾಖಲಿಸಿ ರೂ. 1,58,000/- ಫೈನ್‌ ವಿದಿಸಲಾಗಿರುತ್ತದೆ. ಇದರಲ್ಲಿ ಪಾನಮತ್ತ ಚಾಲನೆ ಬಗ್ಗೆ 1, ಸರಿಯಾದ ದಾಖಲೆಗಳನ್ನು ಹೊಂದದೇ ಇರುವ ಬಗ್ಗೆ 39, ಓವರ್‌ ಲೋಡ್‌ ಹೊಂದಿರುವ ಬಗ್ಗೆ 48 ಹಾಗೂ 194 ಇತರ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.ಈ ವಿಶೇಷ ತಪಾಷಣಾ ಡ್ರೈವ್‌ ನಲ್ಲಿ 5 ಪೊಲೀಸ್‌ ನಿರೀಕ್ಷಕರು, 30 ಪೊಲೀಸ್‌ ಉಪನಿರೀಕ್ಷಕರು ಹಾಗೂ ಸಿಬ್ಬಂಧಿಗಳು ಭಾಗವಹಿಸಿರುತ್ತಾರೆ. ಈ ಬಗ್ಗೆ ಸಂಬಂಧಿತ ಶಾಲಾ ಆಡಳಿತ ಮಂಡಳಿಗಳಿಗೆ ಶಾಲೆಯ ಎಲ್ಲಾ ವಾಹನಗಳ ದಾಖಲಾತಿ, ವಾಹನದ ಮಿತಿಗನುಗುಣವಾಗ ಮಕ್ಕಳ ಸಂಖ್ಯೆ ಹಾಗೂ ಇತರೇ ಸುರಕ್ಷತಾ ಕ್ರಮಗಳನ್ನು ಒಂದು ವಾರದ ಒಳಗೆ ಅಳವಡಿಸಿಕೊಳ್ಳುವಂತೆ ಹಾಗೂ ಈ ಎಲ್ಲಾ ಸೌಲಭ್ಯ ಹಾಗೂ ದಾಖಲಾತಿಗಳನ್ನು ಒಂದು ವಾರದ ಓಳಗೆ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಸಬಂಧಿತ ಶಾಲಾ ವಾಹನಗಳನ್ನು ಸೀಜ್‌ ಮಾಡುವ ಬಗ್ಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.