Home Crime ಉಡುಪಿ : ಹಾವು ಕಡಿತ : ಮಹಿಳೆ ಮೃತ್ಯು…!!

ಉಡುಪಿ : ಹಾವು ಕಡಿತ : ಮಹಿಳೆ ಮೃತ್ಯು…!!

ಅಮಾಸೆಬೈಲು: ಮಡಾಮಕ್ಕಿ ಗ್ರಾಮದ ಮಾಂಡಿಮೂರಕೈ ಬಳಿ ವಿಷದ ಹಾವು ಕಡಿತಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಮಾಂಡಿಮೂರಕೈ ನಿವಾಸಿ ಜಲಜಾಕ್ಷಿ ಶೆಡ್ತಿ(76) ಎಂದು ಗುರುತಿಸಲಾಗಿದೆ.

ಇವರು ಮನೆಯಲ್ಲಿ ತಲೆಕೂದಲಿಗೆ ಹಾಕುವ ಚೌರಿ ತೆಗೆಯಲು ಚೀಲಕ್ಕೆ ಕೈ ಹಾಕಿದಾಗ ಚೀಲದೊಳಗಿದ್ದ ವಿಷದ ಹಾವು ಬಲಗೈಯ ಬೆರಳಿಗೆ ಕಚ್ಚಿದೆ ಎಂದು ಹೇಳಲಾಗಿದೆ.

ಘಟನೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರು, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.