ಕುಂದಾಪುರ : ಭಾರೀ ಗಾಳಿ ಮಳೆಯಿಂದಾಗಿ ಅಮಾಸೆಬೈಲು ಸಮೀಪ ಮಚ್ಚಟ್ಟು ಗ್ರಾಮದ ನಕ್ಸಲ್ ನಾಯಕಿ ತೊಂಬಟ್ಟು ಲಕ್ಷ್ಮೀ ಮನೆ ಕುಸಿತಗೊಂಡಿದೆ.
ರವಿವಾರ ಬೆಳಗಿನ ಜಾವದ ಸಮಯದಲ್ಲಿ ಸುರಿದ ಭಾರೀ ಮಳೆಗೆ ಮನೆಯ ಗೋಡೆ ಸಂಪೂರ್ಣ ಕುಸಿತಗೊಂಡಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಮನೆಯಲ್ಲಿ ನಕ್ಸಲ್ ನಾಯಕಿ ಲಕ್ಷ್ಮೀ ಅವರ ಸಹೋದರ ಹಾಗೂ ಸಹೋದರಿ ಮತ್ತು ಅವರ ಮಕ್ಕಳು ವಾಸವಾಗಿದ್ದಾರೆ. ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.