ಉಡುಪಿ : ಕುದುರೆಮುಖ ಅರಣ್ಯ ಪ್ರದೇಶಗಳಲ್ಲಿ ದಶಕಗಳಿನಿಂದ ವಾಸಿಸುತ್ತಿರುವ ಕುಟುಂಬಗಳು ಆ ಭಾಗದಲ್ಲಿ ವಾಸ ಮಾಡಲು ಅನುಮತಿಯಿಲ್ಲದೆ, ಜೀವನೋಪಾಯಕ್ಕೆ ತೀವ್ರ ಸಂಕಷ್ಟ ಎದುರಿಸುತ್ತಿವೆ. ಈ ಕುಟುಂಬಗಳಿಗೆ ಪುನರ್ವಸತಿ ಹಾಗೂ ನ್ಯಾಯಯುತ ಪರಿಹಾರದ ಅಗತ್ಯ ಬಹಳ ದಿನಗಳಿಂದಲೂ ಪ್ರಸ್ತಾಪವಾಗುತ್ತಿದ್ದ ಮಹತ್ವದ ವಿಚಾರ.
ಕುದುರೆಮುಖ ಕಬ್ಬಿಣದ ಅದಿರು ಗಣಿಗಾರಿಕೆ ಕಂಪನಿ ಕೆಲಸಕ್ಕಾಗಿ ವಿವಿಧ ಕಡೆಗಳಿಂದ ಹಲವು ಕುಟುಂಬಗಳು ಕುದುರೆಮುಖ ಪ್ರದೇಶಕ್ಕೆ ಬಂದು ಕೆ ಐ ಓ ಸಿ ಎಲ್ ಕಂಪನಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು,ಆನಂತರದ ದಿನಗಳಲ್ಲಿ ಕಂಪನಿ ಮುಚ್ಚಿ ಹೋಗಿದ್ದು ಇಲ್ಲಿ ದುಡಿಯುತ್ತಿದ್ದ ಹಲವರು ಕುಟುಂಬಗಳು ನಿರೋದ್ಯೋಗಿಗಳಾಗಿ ಹೋಗಿದ್ದಾರೆ.ಸದ್ಯ ಕಳಸ ಶೃಂಗೇರಿ ಕಡೆ ಕಾಪಿ ತೋಟಗಳಲ್ಲಿ ಹಾಗೂ ಉಡುಪಿ ಭಾಗಕ್ಕೆ ಕೃಷಿ ಕಾಮಗಾರಿಗೆ ವಲಸಿ ಕೂಲಿ ಕೆಲಸ ಮಾಡಿಕೊಂಡು ಸ್ವಂತಕ್ಕೆ ಸೂರು ಇಲ್ಲದೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗಿದೆ.
ಪುನರ್ವಸತಿ ಕೇವಲ ಸ್ಥಳಾಂತರವಲ್ಲ — ಬದುಕು ಪುನರ್ನಿರ್ಮಿಸುವ ಪ್ರಕ್ರಿಯೆ.
ಕುದುರೆಮುಖ ಪರಿಸರ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವುದರಿಂದ ಹಾಗು ಕಸ್ತೂರಿ ರಂಗನ್ ವರದಿ ವಿಚಾರ ಕೂಡ ಇರುವುದು ಆ ಬಾಗದ ಜನರಿಗೆ ಕುದುರೆಮುಖ ಭಾಗದಲ್ಲಿ ವಸತಿಗಾಗಿ ಜಾಗ ನೀಡುವಲ್ಲಿ ಕಾನೂನು ತೊಡಕಾಗಿದೆ.ಈ ಎಲ್ಲಾ ನಿಟ್ಟಿನಲ್ಲಿ ಆ ಭಾಗದಲ್ಲಿ ಇರುವ ನಿರಾಶ್ರಿತರಿಗೆ ಸರ್ಕಾರವೇ ಪುನರ್ವಸತಿ ನೀಡಬೇಕೆಂದು ಹಾಗೂ ಮೂಲಬೂತ ಸೌಕರ್ಯಗಳಿಲ್ಲದೆ ಜನರು ಎದುರಿಸುತ್ತಿರುವ ದೀರ್ಘಕಾಲದ ನೋವಿಗೆ ಸಕಾರಾತ್ಮಕ ಪರಿಹಾರ ದೊರಕುವಂತೆ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡರಾದ ನವೀನ್ ಸಾಲಿಯನ್ ಮನವಿ ಮಾಡಿದ್ದಾರೆ.




