Home Crime ವ್ಯಕ್ತಿಯೋರ್ವರು ತೆಂಗಿನಮರದಿಂದ ಕಾಯಿ ಕೊಯ್ಯುತ್ತಿರುವಾಗ ಆಕಸ್ಮಾತ್‌ ಕಾಲು ಜಾರಿ ಆಯತಪ್ಪಿ ಕೆಳಗೆ ಬಿದ್ದು ಸಾವು…!!

ವ್ಯಕ್ತಿಯೋರ್ವರು ತೆಂಗಿನಮರದಿಂದ ಕಾಯಿ ಕೊಯ್ಯುತ್ತಿರುವಾಗ ಆಕಸ್ಮಾತ್‌ ಕಾಲು ಜಾರಿ ಆಯತಪ್ಪಿ ಕೆಳಗೆ ಬಿದ್ದು ಸಾವು…!!

ಶಂಕರನಾರಾಯಣ: ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ವ್ಯಕ್ತಿಯೊಬ್ಬರು ಮನೆಯ ತೆಂಗಿನಮರದಿಂದ ಕಾಯಿ ಕೊಯ್ಯುತ್ತಿರುವಾಗ ಆಕಸ್ಮಾತ್‌ ಕಾಲು ಜಾರಿ ಆಯತಪ್ಪಿ ತೆಂಗಿನ ಮರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಮೃತಪಟ್ಟವರು ರವೀಂದ್ರನಾಥ ಶೆಟ್ಟಿ ಎಂದು ತಿಳಿಯಲಾಗಿದೆ.

ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ಪಿರ್ಯಾದುದಾರ ಪುಷ್ಪಲತಾ ಶೆಡ್ತಿ (35) ಗಂಡ:ಪ್ರವೀಣ ಶೆಟ್ಟಿ ವಾಸ:ಮೇಲ್ಕಡ್ರಿ ಸಿದ್ಧಾಪುರ ಗ್ರಾಮ ಇವರ ತಂದೆ ರವೀಂದ್ರನಾಥ ಶೆಟ್ಟಿ (70) ರವರು ಕೃಷಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 09/12/2025 ರಂದು ಬೆಳಿಗ್ಗೆ ತಮ್ಮ ಮನೆಯ ತೆಂಗಿನಮರದಿಂದ ತೆಂಗಿನ ಕಾಯಿ ಕೊಯ್ಯುತ್ತಿರುವಾಗ ಬೆಳಿಗ್ಗೆ 09-30 ಗಂಟೆಗೆ ಆಕಸ್ಮಾತ್‌ ಕಾಲು ಜಾರಿ ಆಯತಪ್ಪಿ ತೆಂಗಿನ ಮರದಿಂದ ಕೆಳಗೆ ಬಿದ್ದು ತಲೆಗೆ ರಕ್ತಗಾಯವಾಗಿ ಪೆಟ್ಟಾಗಿದ್ದು, ಅವರನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದಲ್ಲಿ ಚಿಕಿತ್ಸೆಯಲ್ಲಿರುತ್ತಾ ಮದ್ಯಾಹ್ನ 1-54 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ರವೀಂದ್ರನಾಥ ಶೆಟ್ಟಿ ರವರು ಮೃತಪಟ್ಟಿರುತ್ತಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ ನಂಬ್ರ :36/2025 ಕಲಂ:194 BNSS ರಂತೆ ಪ್ರಕರಣ ದಾಖಲಿಸಲಾಗಿದೆ.