Home Karavali Karnataka ಕರಾವಳಿ ಯೂತ್ ಕ್ಲಬ್ ರಿ. ಉಡುಪಿ ಸಂಸ್ಥೆಯ “KYC ವಿದ್ಯಾರ್ಥಿ ನಿಧಿ” ಕಾರ್ಯಕ್ರಮ…!!

ಕರಾವಳಿ ಯೂತ್ ಕ್ಲಬ್ ರಿ. ಉಡುಪಿ ಸಂಸ್ಥೆಯ “KYC ವಿದ್ಯಾರ್ಥಿ ನಿಧಿ” ಕಾರ್ಯಕ್ರಮ…!!

ಉಡುಪಿ : ಕರಾವಳಿ ಯೂತ್ ಕ್ಲಬ್ ರಿ. ಉಡುಪಿ ಸಂಸ್ಥೆಯ “KYC ವಿದ್ಯಾರ್ಥಿ ನಿಧಿ” ಕಾರ್ಯಕ್ರಮವು ದಿನಾಂಕ 21.09.2025 ರಂದು ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ “KYC ವಿದ್ಯಾರ್ಥಿ ನಿಧಿ” ಎಂಬ ಯೋಜನೆಯಡಿಯಲ್ಲಿ ಒಟ್ಟು 27 ಜನ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನವನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಅತಿಥಿಗಳಿಗೆ ಪರಿಸರ ಸಂರಕ್ಷಣೆ ಉದ್ದೇಶದಿಂದ ಹಣ್ಣಿನ ಗಿಡಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಡಾ.ಉದಯ ಶೆಟ್ಟಿ ಕೆ (ಪ್ರಾಧ್ಯಾಪಕರು), ವಿಶು ಶೆಟ್ಟಿ ಅಂಬಲಪಾಡಿ, ರವಿರಾಜ್ ಆಚಾರ್ಯ , ಎಂ ಪ್ರಭಾಕರ್ ಶೆಟ್ಟಿ ಹಾಗೂ KYC ಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಭಾಗಿಯಾಗಿದ್ದರು.