Home Crime ಕಡಬ: ವಿವಾಹಿತ ಮಹಿಳೆ ನಾಪತ್ತೆ…!!

ಕಡಬ: ವಿವಾಹಿತ ಮಹಿಳೆ ನಾಪತ್ತೆ…!!

ಕಡಬ: ತಾಲೂಕಿನ ಬಂಟ್ರ ಗ್ರಾಮದಲ್ಲಿ ವಿವಾಹಿತ ಮಹಿಳೆಯೋರ್ವರು ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾದವರು ಬಂಟ್ರ ಗ್ರಾಮದ ಸುಪ್ರೀತ್‌ ಕುಮಾ‌ರ್ ಜಿ (34) ಅವರ ಪತ್ನಿ ಕವಿತಾ (27) ಎಂದು ತಿಳಿದು ಬಂದಿದೆ.

ಕವಿತಾ ಅವರು ಇತ್ತೀಚೆಗೆ ತಮ್ಮ ತಾಯಿ ಮನೆಯಾದ ಬೆಳ್ತಂಗಡಿಯ ನ್ಯಾಯ ತರ್ಪು ಗ್ರಾಮದ ಗೋವಿಂದೂರು ಮನೆಗೆ ಹೋಗಿ ಶುಕ್ರವಾರ ಮರಳುವುದಾಗಿ ಪತಿಗೆ ತಿಳಿಸಿದ್ದರು.

ಆದರೆ ಡಿ.3ರಂದು ಬೆಳಿಗ್ಗೆ ಪತಿ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲಿ ಯಾರಿಗೂ ತಿಳಿಯದಂತೆ ಹೊರಗೆ ಹೋಗಿದ್ದು ಸಂಜೆವರೆಗೂ ಮರಳಿ ಬರಲಿಲ್ಲ ಎಂದು ತಿಳಿದು ಬಂದಿದೆ.

ಪತ್ನಿ ತಾಯಿ ಮನೆಗೆ ಹೋಗಿರಬಹುದು ಎಂದು ಭಾವಿಸಿದ ಪತಿ ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿ ಕವಿತಾ ಹೋಗಿಲ್ಲವೆಂದು ತಿಳಿದು ಬಂದಿದೆ.

ಬಳಿಕ ನೆರೆಹೊರೆಯವರು ಹಾಗೂ ಬಂಧುಮಿತ್ರರಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗದೆ ಇರುವುದರಿಂದ ಸುಪ್ರೀತ್ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.