ನಗದು ಹಾಗೂ ಚಿನ್ನಾಭರಣ ಕಳವು…..
ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಕುಕ್ಕುಂದೂರು ಗ್ರಾಮದ ಮನೆಯೊಂದರಲ್ಲಿ ಕಳ್ಳರು ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಬೆಡ್‌ರೂಮ್‌ನಲ್ಲಿ ಕಬ್ಬಿಣದ ಕಪಾಟನ್ನು ಪಿಕ್ಕಾಸಿನಿಂದ ಒಡೆದು ಕಪಾಟಿನಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ ಘಟನೆ ನಡೆದಿದೆ.
ಸಾತುರ್ನಿಸ್ ಮತಾಯಸ್ ಎಂಬವರ ಮನೆಯಲ್ಲಿ ಕಳ್ಳತನ ಸಂಭವಿಸಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಾರಾಂಶ : ಪಿರ್ಯಾದುದಾರ ಸಾತುರ್ನಿನ್ ಮತಾಯಸ್ ಪ್ರಾಯ 70 ವರ್ಷ ತಂದೆ; ಪಿಯಾದ್ ಮಥಾಯಸ್ ವಾಸ: ಮಂದಿರ್ಗೆ ಮನೆ, ನಕ್ರೆ, ಕುಕ್ಕುಂದೂರು ಗ್ರಾಮ ಇವರು ದಿನಾಂಕ 15.09.2025 ರಂದು ಮದ್ಯಾಹ್ನ 13.00 ಗಂಟೆಗೆ ಮನೆಗೆ ಬೀಗ ಹಾಕಿ ಉತ್ತರ ಭಾರತದ ಲೇಹ್‌ಗೆ ಹೋಗಿದ್ದು ಹಾಗೂ ಇವರ ಪತ್ನಿಯು ಕಾರ್ಕಳದ ಬಂಗ್ಲೆಗುಡ್ಡೆ ಎಂಬಲ್ಲಿಗೆ ಅತ್ತಿಗೆ ಮನೆಗೆ ಹೋಗಿದ್ದು, ದಿನಾಂಕ 01.10.2025 ರಂದು 1.20 ಗಂಟೆಗೆ ವಾಪಾಸು ಮನೆಗೆ ಬಂದು ನೋಡಿದಾಗ, ಯಾರೋ ಕಳ್ಳರು ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಒಳ ಪ್ರವೇಶಿಸಿ ಬೆಡ್‌ರೂಮ್‌ನಲ್ಲಿ ಕಬ್ಬಿಣದ ಕಪಾಟನ್ನು ಪಿಕ್ಕಾಸಿನಿಂದ ಒಡೆದು ಕಪಾಟಿನಲ್ಲಿದ್ದ ನಗದು ರೂ, 1,50,000/- ಹಣ, ಸುಮಾರು 24 ಗ್ರಾಮ್ ತೂಕದ ಚಿನ್ನದ ನೆಕ್ಲೆಸ್, ಸುಮಾರು 12 ಗ್ರಾಮ್ ತೂಕದ 2 ಚಿನ್ನದ ಚಿನ್ನದ ಬಳೆಗಳು, , ಸುಮಾರು 25 ಗ್ರಾಮ್ ತೂಕದ ಚಿನ್ನದ ಚೈನ್ – 2, ಸುಮಾರು 12 ಗ್ರಾಮ್ ತೂಕದ ಚಿನ್ನದ 2 ಜೊತೆ ಕಿವಿಯ ರಿಂಗ್, ವಜ್ರದ ಪೆಂಟೆಂಡ್ ಇರುವ ಚಿನ್ನದ ಚೈನ್ – 1 ಅಂದಾಜು ಮೌಲ್ಯ 1.25000/- ಹಾಗೂ ಒಂದು ಮುತ್ತಿನ ಹಾರ , ಅಮೇರಿಕನ್ ಡಾಲರ್ಸ್ ಅಂದಾಜು ಮೌಲ್ಯ-1000, ಬ್ರಿಟೀಷ್ ಪೌಂಡ್ಸ್ ಅಂದಾಜು ಮೌಲ್ಯ 500 ಆಗಿದ್ದು ಕಳವಾದ ಸೊತ್ತಿನ ಒಟ್ಟು ಮೌಲ್ಯ 6.50,000/-ಗಿರುತ್ತದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 132/2025 ಕಲಂ 331(3), 331(4) 305 BNS ರಂತೆ ಪ್ರಕರಣ ದಾಖಲಿಸಲಾಗಿದೆ.