Home Crime ಒಂಟಿ ಮಹಿಳೆಯ ಮನೆಗೆ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿದ ಖದೀಮರು…!!

ಒಂಟಿ ಮಹಿಳೆಯ ಮನೆಗೆ ನುಗ್ಗಿ ನಗದು ಮತ್ತು ಚಿನ್ನಾಭರಣ ದೋಚಿದ ಖದೀಮರು…!!

ಮಂಗಳೂರು : ಒಂಟಿ ಮಹಿಳೆಯ ಮನೆಗೆ ನುಗ್ಗಿದ ದರೋಡೆಕೋರರು ಮಹಿಳೆಯನ್ನು ಕಟ್ಟಿ ಹಿಡಿದು ಮನೆಯಲ್ಲಿದ್ದ ನಾಲ್ಕು ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 14 ಸಾವಿರ ನಗದು ಕದ್ದೊಯ್ದ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಲಜ ಎನ್ನುವ ಮಹಿಳೆ ಒಂಟಿಯಾಗಿ ವಾಸಿಸುತ್ತಿದ್ದು, ದಿನಾಂಕ: 03-12-2025 ರಂದು ಸುಮಾರು 02.30 ಗಂಟೆಗೆ ಇಬ್ಬರು ಯುವಕರು ಮನೆ ಬಾಗಿಲು ಬಡಿದಿದ್ದಾರೆ. ಈ ವೇಳೆ ಕಿಟಕಿಯ ಮೂಲಕ ನೋಡಿ ಜಲಜ ಅವರಿಗೆ ನೀರು ಬೇಕೆಂದು ಕೇಳಿದ್ದಾರೆ. ಆದರೆ ಅವರು ಕುಡಿಯುವ ನೀರು ಹೊರಗಡೆ ಇದೆ ಕುಡಿದು ಹೋಗಿ ಎಂದು ಹೇಳಿದ್ದಾರೆ.

ಬಳಿಕ ಸ್ವಲ್ಪ ಹೊತ್ತಿನಲ್ಲಿ ಒಬ್ಬ ಯುವಕ ಮಹಿಳೆಯ ಮನೆಯ ಹೆಂಚನ್ನು ತೆಗೆದ ಮನೆಯ ಒಳಗೆ ಪ್ರವೇಶಿಸಿ ಬಳಿಕ ಮನೆಯ ಮುಂಬಾಗಿಲನ್ನು ತೆರೆದಿದ್ದು ಮತ್ತೊಬ್ಬ ಯುವಕ ಹೊರಗಿನಿಂದ ಒಳಗೆ ಪ್ರವೇಶಿಸಿ ಮಹಿಳೆಯನ್ನು ಬಲವಂತವಾಗಿ ರೂಮಿಗೆ ಕರೆದುಕೊಂಡು ಹೋಗಿ “ಬಂಗಾರ್ ಒಲ್ಪ ಉಂಡು” (ಬಂಗಾರ ಎಲ್ಲಿದೆ) ಎಂದು ತುಳುವಿನಲ್ಲಿ ಜೋರಾಗಿ ಬೆದರಿಸಿದ್ದಾರೆ. ಒಬ್ಬನು ಅಲ್ಲೇ ಇದ್ದ ಬೈರಾಸನ್ನು ಪಿರ್ಯಾದಿದಾರರ ಕುತ್ತಿಗೆಗೆ ಬಿಗಿದು “ಬೊಬ್ಬೆ ಪಾಡುಂಡ ಕೆರ್ಪೆ ಬಂಗಾರ್ ಇಜ್ಜಾ ಉಂಡಾ ತೂಪ ಎಂಕುಲ್ ಏರೆನ್ಲಾ ಲೆತ್ತ್ಂಡ ನಾಲಿಡ್ ಪತ್ತ್ದ್ ಕೆರ್ಪೆ” (ಬೊಬ್ಬೆ ಹೊಡೆದರೆ ಸಾಯಿಸುತ್ತೇನೆ. ಬಂಗಾರ ಇದೆಯೋ ಇಲ್ಲವೋ ನೋಡುತ್ತೇನೆ ಯಾರನ್ನಾದರೂ ಕರೆದರೆ ಕತ್ತಿಗೆ ಹಿಸುಕಿ ಸಾಯಿಸುತ್ತೇನೆ) ಎಂದು ತುಳುವಿನಲ್ಲಿ ಬೆದರಿಸಿ ಅಲ್ಲೇ ಇದ್ದ ಕಬ್ಬಿಣದ ಗೋದ್ರೇಜನ್ನು ತೆರೆದು ಅದರಲ್ಲಿದ್ದ ಬಟ್ಟೆ ಬರೆ, ಪೇಪರ್, ಪ್ಲಾಸ್ಟಿಕ್ ಕವರ್ ಗಳನ್ನು ಕೆಳಗೆ ಬಿಸಾಕಿ ಗೋದ್ರೇಜ್ ನಲ್ಲಿದ್ದ ಪ್ಲಾಸ್ಟಿಕ್ ಡಬ್ಬಗಳಲ್ಲಿ ಇದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ 2 ಚಿನ್ನದ ಬಳೆ ಹಾಗೂ ಪರ್ಸ್ ನಲ್ಲಿ ಸುಮಾರು 14,000/- ರೂಪಾಯಿ ನಗದು ಹಣವನ್ನು ದೋಚಿರುತ್ತಾರೆ.

ನಂತರ ಪಿರ್ಯಾದಿದಾರರು ಧರಿಸಿದ್ದ ಬಂಗಾರದ ಕಿವಿಯೋಲೆಯನ್ನು ಅವರಲ್ಲಿದ್ದ ಒಬ್ಬ ಯುವಕನು ಪಿರ್ಯಾದಿದಾರರಿಂದ ಬಲವಂತವಾಗಿ ಕಸಿದುಕೊಂಡಿದ್ದು ಅದರ ಒಟ್ಟು ತೂಕ ಸುಮಾರು 6 ಗ್ರಾಂ ಆಗಿರುತ್ತದೆ ಇಬ್ಬರೂ ಯುವಕರು ಮನೆಯ ಮುಂಬಾಗಿಲಿನಿಂದ ಹೊರಗೆ ಹೋಗಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿರುತ್ತಾರೆ.

ಪಿರ್ಯಾದಿದಾರರನ್ನು ಬೆದರಿಸಿ ಮನೆಯಲ್ಲಿದ್ದ ಒಟ್ಟು 42 ಗ್ರಾಂ ಚಿನ್ನದ ಒಡವೆ ಹಾಗೂ 14,000/- ಹಣವನ್ನು ದೋಚಿದ್ದು ಆಭರಣಗಳ ಒಟ್ಟು ಮೌಲ್ಯ 4,00,000/- ಆಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.