Home Karavali Karnataka ನಾನು ಸೇವಾ ರೂಪದಲ್ಲಿ ಅರ್ಪಿಸಿದ ಸುವರ್ಣ ಕವಚದಿಂದ ಅಲಂಕರಿಸಲ್ಪಟ್ಟ ಕನಕನ ಕಿಂಡಿಯನ್ನು ಮಾನ್ಯ ಪ್ರಧಾನಮಂತ್ರಿ ಶ್ರೀ...

ನಾನು ಸೇವಾ ರೂಪದಲ್ಲಿ ಅರ್ಪಿಸಿದ ಸುವರ್ಣ ಕವಚದಿಂದ ಅಲಂಕರಿಸಲ್ಪಟ್ಟ ಕನಕನ ಕಿಂಡಿಯನ್ನು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ಉದ್ಘಾಟಿಸಿರುವುದು ನನಗೆ ಅವಿಸ್ಮರಣೀಯ ಕ್ಷಣವಾಗಿದೆ : ಪ್ರಮೋದ್ ಮಧ್ವರಾಜ್…!!

ಉಡುಪಿ : 1965ರಲ್ಲಿ ನನ್ನ ಪೂಜ್ಯ ತಂದೆಯವರಾದ ಮಲ್ಪೆ ಮಧ್ವರಾಜರು ಶಾಸಕರಾಗಿದ್ದ ಸಂದರ್ಭದಲ್ಲಿ ಉಡುಪಿಯಲ್ಲಿ ಕನಕದಾಸರಿಗಾಗಿ ನಿರ್ಮಿಸಲಾದ ಪವಿತ್ರ ಗುಡಿಯಲ್ಲಿ, ರಾಷ್ಟ್ರದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಇಂದು ಭೇಟಿ ನೀಡಿ ಶ್ರೀ ಕನಕದಾಸರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು ಎಂದು ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಹೇಳಿದರು.

ಅಂದು ಈ ಕನಕದಾಸರ ಗುಡಿಯ ಉದ್ಘಾಟನೆಗೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪ ರವರು ಸ್ವತಃ ಆಗಮಿಸಿದ್ದರೆ, ಇಂದು ಅದೇ ಕನಕದಾಸರಿಗಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಶಯದಂತೆ ನಾನು ಸೇವಾರೂಪದಲ್ಲಿ ಅರ್ಪಿಸಲಾದ ಸ್ವರ್ಣಮಯ ಚಿನ್ನದ ಕವಚದ ಕನಕನ ಕಿಂಡಿಯ ಉದ್ಘಾಟನೆಗೆ ರಾಷ್ಟ್ರದ ಹೆಮ್ಮೆಯ ಪ್ರಧಾನಮಂತ್ರಿಗಳೇ ಆಗಮಿಸಿರುವುದು, ಕನಕದಾಸರ ದಿವ್ಯ ಪವಾಡಕ್ಕೆ ನಿಜವಾದ ಸಾಕ್ಷಿಯಾಗಿದೆ.

ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಆಶಯದಂತೆ, ಭಕ್ತಿಭಾವಪೂರ್ವಕವಾಗಿ ನಾನು ಸೇವಾ ರೂಪದಲ್ಲಿ ಅರ್ಪಿಸಿದ ಸುವರ್ಣ ಕವಚದಿಂದ ಅಲಂಕರಿಸಲ್ಪಟ್ಟ ಕನಕನ ಕಿಂಡಿಯನ್ನು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ಉದ್ಘಾಟಿಸಿ, ಶ್ರೀ ಕೃಷ್ಣನ ದಿವ್ಯ ದರ್ಶನವನ್ನೂ ಪಡೆದರು. ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳು ಉದ್ಘಾಟಿಸಿರುವುದು ನನಗೆ ಅವಿಸ್ಮರಣೀಯ ಕ್ಷಣವಾಗಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿಕೆ ನೀಡಿದ್ದಾರೆ.