ಹೆಬ್ರಿ: ಉಡುಪಿ ಜಿಲ್ಲೆಯ ಹೆಬ್ರಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ 12 ಮಂದಿ ನಿರ್ದೇಶಕರು ಸೇರಿ ಅಲ್ಲಿಯ ಜವಾನನಿಗೆ ಸಂಬಳ ನೀಡದೆ ಕೆಲಸದಿಂದ ಅಮಾನತುಗೊಳಿಸಿ ಆರ್ಥಿಕ ಬಹಿಷ್ಕಾರ ಮಾಡಿದ ಘಟನೆ ನಡೆದಿದೆ.
ಶಿವಪುರ ಗ್ರಾಮದ ಶಂಕರ ಎಂಬವರು ಸಂಘದಲ್ಲಿ 30 ವರ್ಷಗಳಿಂದ ಜವಾನನಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಶಂಕರ ಎಂಬವವರಿಗೆ ಶೀನ, ನವೀನ. ಕೆ, ಸುಂದರ ಹಾಗೂ 12 ಮಂದಿ ನಿರ್ದೇಶಕರು ಸೇರಿ ಉದ್ದೇಶಪೂರ್ವಕವಾಗಿ ಸಂಬಳ ನೀಡದೆ, ಕೆಲಸದಿಂದ ಅಮಾನತುಗೊಳಿಸಿ ಆರ್ಥಿಕ ಬಹಿಷ್ಕಾರ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾಧ ಶಂಕರ ಶಿವಪುರ ಗ್ರಾಮ ಹೆಬ್ರಿ ತಾಲೂಕು ಉಡುಪಿ ಇವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ಸುಮಾರು 30 ವರ್ಷಗಳಿಂದ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಜವಾನನಾಗಿ ಕೆಲಸ ಮಾಡಿಕೊಂಡಿದ್ದು ಸದ್ರಿ ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಾಗಿರುವ ಶೀನ ಹಾಗೂ ಅದ್ಯಕ್ಷರಾದ ನವೀನ ಕೆ, ಹಾಗೂ ಇದೇ ಸೇವಾ ಸಹಕಾರಿ ಸಂಘದ 12 ಜನ ನಿರ್ದೇಶಕರು ಮತ್ತು ನಾಡ್ಪಾಲು ಗ್ರಾಮ ಕಾಸನಮಕ್ಕಿ ಸುಂದರ ಇವರುಗಳು ಸೇರಿ ಪಿರ್ಯಾದುದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಸಂಬಳ ನೀಡದೆ ಪಿರ್ಯಾದಿದಾರರನ್ನು ಕೆಲಸದಿಂದ ಅಮಾನತುಗೊಳಿಸಿ ಆರ್ಥಿಕ ಬಹಿಷ್ಕಾರ ಮಾಡಿರುತ್ತಾರೆ ಅಲ್ಲದೆ ಪಿರ್ಯಾದುದಾರರ ವಿರುದ್ದ ಸುಳ್ಳು, ಕಿರುಕುಳ , ದ್ವೇಷ ಪೂರಿತ ದಾವೆ ಮೊಕದ್ದಮೆ ಹಾಗೂ ಕಾನೂನು ವ್ಯವಹಾರ ಮಾಡಿ ಮಾನಸಿಕ ಹಿಂಸೆ ನೀಡಿ ದೌರ್ಜನ್ಯ ಎಸಗಿರುವುದಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 43/2025 ಕಲಂ: 3(1) (p), 3(1)(z c) SC ST ACTರಂತೆ ಪ್ರಕರಣ ದಾಖಲಾಗಿರುತ್ತದೆ