Home Crime ಹಣ ಹೂಡಿಕೆ ನೆಪದಲ್ಲಿ ವಂಚನೆ : ಬರೋಬ್ಬರಿ 12 ಲಕ್ಷ ರೂ. ಕಳೆದುಕೊಂಡ ಕಾರ್ಕಳದ ವ್ಯಕ್ತಿ…!!

ಹಣ ಹೂಡಿಕೆ ನೆಪದಲ್ಲಿ ವಂಚನೆ : ಬರೋಬ್ಬರಿ 12 ಲಕ್ಷ ರೂ. ಕಳೆದುಕೊಂಡ ಕಾರ್ಕಳದ ವ್ಯಕ್ತಿ…!!

ಉಡುಪಿ : ಹಣ ಹೂಡಿಕೆ ಹೆಸರಲ್ಲಿ ದುಬೈಯಲ್ಲಿ ಉದ್ಯೋಗದಲ್ಲಿದ್ದ ಕಾರ್ಕಳ ಮೂಲದ ವ್ಯಕ್ತಿಯೊಬ್ಬರಿಗೆ 12 ಲಕ್ಷ ರೂ. ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆರ್ಮುಂಡೆ ಬೀಜಪಾಡಿಯ ಲಿಯೋ ಜೆರೋಮ್ ಮೆಂಡೋನ್ಸಾ ಅವರು 15 ವರ್ಷಗಳಿಂದ ದುಬೈಯಲ್ಲಿ ಉದ್ಯೋಗ ಮಾಡಿಕೊಂಡಿದ್ದು, ಕಾರ್ಕಳ ಕಣಜಾರು ಹಾಗೂ ನಿಟ್ಟೆ ದೂಪದಕಟ್ಟೆಯ ಬ್ಯಾಂಕ್‌ಗಳಲ್ಲಿ ಬ್ಯಾಂಕ್ ಖಾತೆ ಹೊಂದಿರುತ್ತಾರೆ.

ನ. 12ರಂದು ಲಿಯೋ ಅವರು ದುಬೈಯಲ್ಲಿ ಇರುವಾಗ ಟೆಲಿಗ್ರಾಂ ಖಾತೆಯಲ್ಲಿ ಅಪರಿಚಿತರು ಸಂಪರ್ಕಿಸಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿರುತ್ತಾರೆ. ಅದರಂತೆ ಲಿಯೋ ಹಣ ಹೂಡಿಕೆ ಮಾಡಿದ್ದು, ಅದರಂತೆ ಅದಕ್ಕೆ ಪ್ರತಿಯಾಗಿ ಲಾಭಾಂಶ ನೀಡುತ್ತಿದ್ದ. ಅದೇ ರೀತಿ ವಿವಿಧ ಟಾಸ್ಕ್ ಗಳನ್ನು ನೀಡಿ, ವೆಬ್ ವಿಳಾಸ ನೀಡಿ ಅದರಲ್ಲಿ ಯೂಸರ್ ನೇಮ್ ಮತ್ತು ಐಡಿ ಹಾಕುವಂತೆ ತಿಳಿಸಿದರು. ಅದರಂತೆ ಮಾಡಿದ ಲಿಯೊ, ನ. 15ರಿಂದ 17ರವರೆಗೆ ಹಂತ ಹಂತವಾಗಿ ಒಟ್ಟು 12,25,000 ರೂ. ಹೂಡಿಕೆ ಮಾಡಿದ್ದರು. ಬಳಿಕ ಸೈಬರ್‌ ವಂಚಕರು ಲಿಯೊ ಅವರಿಗೆ ಹೂಡಿಕೆ ಮಾಡಿದ ಹಣವನ್ನಾಗಲೀ ಅದರ ಲಾಭಾಂಶವನ್ನಾಗಲಿ ನೀಡದೆ ವಂಚನೆ ಮಾಡಿರುತ್ತಾರೆ ಎಂದು ದೂರಿದ್ದಾರೆ.