ಪುತ್ತೂರು: ವ್ಯಕ್ತಿಯೋರ್ವ ಇಎನ್‌ಟಿ ಕ್ಲಿನಿಕ್‌ಗೆ ನುಗ್ಗಿ ಸಿಬ್ಬಂದಿಗೆ ಹಲ್ಲೆ ಮಾಡಿ ಗ್ಲಾಸ್ ಪುಡಿಗೈದು ದಾಂಧಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ದ.ಕ. ಜಿಲ್ಲೆ ಪುತ್ತೂರಿನ ದರ್ಬೆ ಎಂಬಲ್ಲಿ ಈ ಘಟನೆ ನಡೆದಿದ್ದು, ಡಾ. ರಾಮಮೋಹನ್ ರಾವ್ ಎಂಬವರ ಕ್ಲಿನಿಕ್ ಗೆ ನುಗ್ಗಿ ವ್ಯಕ್ತಿಯೊಬ್ಬ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಾನೆ.
ತನ್ನ ಪರಿಚಯಸ್ಥರನ್ನ ತಪಾಸಣೆಗೆ ಬೇಗ ಒಳಗಡೆ ಬಿಟ್ಟಿಲ್ಲ ಎಂಬ ಕಾರಣಕ್ಕೆ ಕ್ಲೀನಿಕ್ ನ ಸಿಬ್ಬಂದಿಗೆ ವ್ಯಕ್ತಿ ಹಲ್ಲೆ ಮಾಡಿದ್ಡಾನೆ ಎನ್ನಲಾಗಿದೆ. ಇಬ್ರಾಹಿಂ ಎಂಬಾತ ಕ್ಲೀನಿಕ್ ಸಿಬ್ಬಂದಿ ಶ್ರೀಕಾಂತ್ ಎಂಬವರಿಗೆ ಹಲ್ಲೆ ಮಾಡಿದ್ಡಾನೆ. ಹಲ್ಲೆ ಬಳಿಕ ರೋಗಿಗಳಿಗೆ ಭಯ ಹುಟ್ಟಿಸಿ, ಅವಾಚ್ಯವಾಗಿ ಬೈದಿದ್ದಾನೆ.
ಹಲ್ಲೆಗೈದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುತ್ತೂರಿನ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂಬಾತನ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



