ಬೈಂದೂರು : ಮೇಕೋಡು ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ಮೇಕೋಡು – ಉಳ್ಳೂರು -11, ಬೈಂದೂರು ತಾಲೂಕು
ಸಂಘದ 2024-2025ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಮೇಕೋಡಮ್ಮ ಸಭಾಭವನದಲ್ಲಿ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಸಂಘದ ಅಧ್ಯಕ್ಷರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ
ಮಾತನಾಡಿ,ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸಿರುವುದು ಮಹತ್ತರವಾದ ಬೆಳವಣಿಗೆ ಆಗಿದೆ.
ಸಂಘವು ಪ್ರಸ್ತುತ ಸಾಲಿನಲ್ಲಿ 7 ಲಕ್ಷದ 65ಸಾವಿರ ಲಾಭಗಳಿಸಿದ್ದು. ಹಾಲು ಉತ್ಪಾದಕ ಸದಸ್ಯರಿಗೆ 65% ಬೋನಸ್ ಹಾಗೂ ಸದಸ್ಯರಿಗೆ 10% ಡಿವಿಡೆಂಡ್ ಘೋಷಿಸಿದರು.
ಹಿಂದಿನ ಸಾಲನ ಸಂಘದ ಸದ್ಯಸರ ಹಾಲಿನ ಆಧಾರದ ಮೇಲೆ ಬಹುಮಾನ ನೀಡಲಾಗಿದೆ. 2000 ಲೀಟರ್ ಹಾಲು ಉತ್ಪಾದನೆ ಮಾಡುವುದರ ಮೂಲಕ ಮುಂದಿನ ವರ್ಷ ನಮ್ಮ ಪ್ರಮುಖ ಗುರಿಯಾಗಿದೆ ಮತ್ತುಬಮುಂದಿನ ಹಾಲು ಉತ್ಪಾದನೆಯಲ್ಲಿ ತೊಡಗಿ ಕೊಳ್ಳುವುದರ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಕೇಳಿಕೊಂಡರು.
ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್. ಕುಶಲ್ ಕುಮಾರ್ ಅವರು 2024-25ನೇ ಸಾಲಿನ ವಾರ್ಷಿಕ ವರದಿ ಮಂಡನೆ ಮಾಡಿದರು.ಅಧ್ಯಕ್ಷರು ಸಂಘದಸದಸ್ಯರಿಂದ ಅನುಮೋದನೆ ಪಡೆದು ಕೊಂಡು.ಸಂಘದ ಸದಸ್ಯರಿಗೆ 10% ಡಿವಿಡೆಂಡ್ ಮತ್ತು ಸಂಘದ ಹಾಲು ಉತ್ಪಾದಕರಿಗೆ 65% ಬೋನಸ್ ಘೋಷಣೆ ಮಾಡಿದರು.
ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಎಸ್ ಪ್ರಕಾಶ್ ಚಂದ್ರ ಶೆಟ್ಟಿ ಅವರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಉಪ ವ್ಯವಸ್ಥಾಪಕರಾದ ಶಂಕರ್ ನಾಯ್ಕ್,ವಿಸ್ತರಣಾಧಿಕಾರಿ ರಾಜರಾಮ್, ಉಪಾಧ್ಯಕ್ಷರಾದ ಸಂತೋಷ ಗೌಡ, ಕೊಣಾಲ್ ನಿರ್ದೇಶಕರಾದ ಗೋಪಾಲ ಶೆಟ್ಟಿ ಯರುಕೋಣೆ,ಎನ್. ಪದ್ಮನಾಭ ಅಡಿಗ,ವೈ. ಜಯರಾಮ ಹೆಬ್ಬಾರ್,
ವೈ. ಗೋವಿಂದ ಹೆಬ್ಬಾರ್,ಎಂ.ಎನ್ ಬಾಬು ಮಾಜಾರಿ,ಭಾಸ್ಕರ ದೇವಾಡಿಗ, ಉಳ್ಳೂರು 11,ಉಮೇಶ ಪೂಜಾರಿ, ಉಪ್ಪಳ್ಳಿ,ಕುಷ್ಟು, ಯರುಕೋಣೆ,ಲೀಲಾವತಿ ಪೂಜಾರಿ,ಸುಶೀಲ ಗಾಣಿಗ ನೂಜಾಡಿ,
ಗೌರಿ ಬಿ. ಉಳ್ಳೂರು 11,ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು
ಎಚ್. ಕುಶಲ್ ಕುಮಾರ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಸ್ವಾಗತಿಸಿದರು.ದಿನೇಶ್ ಆಚಾರ್ಯ ನಿರೂಪಿಸಿ ವಂದಿಸಿದರು.
