ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಕಾರ್ಕಳದ ಪಂಚಾಯತ್‌ರಾಜ್ ವಿಭಾಗದ ಇಂಜಿನಿಯರ್ ಸದಾನಂದ ನಾಯ್ಕ್ ಹಾಗೂ ಪತ್ನಿ, ಮಗು ಗಾಯಗೊಂಡ ಘಟನೆ ಹಿರ್ಗಾನ ಗ್ರಾಮದ ಮೂರೂರು ಬಳಿ ಇಂದು ಸಂಜೆ ಸಂಭವಿಸಿದೆ.
ಸದಾನಂದ ನಾಯ್ಕ್ ಕಾರಿನಲ್ಲಿ ಪತ್ನಿ ಹಾಗೂ ಮಗುವಿನ ಜೊತೆ ತನ್ನ ಮನೆಯಾದ ಬ್ರಹ್ಮಾವರದ ಚಾಂತಾರಿಗೆ ಹೊರಟಿದ್ದ ವೇಳೆ ಏಕಾಏಕಿ ವಾಹನ ಅಡ್ಡಬಂದ ಪರಿಣಾಮ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ.
ಗಾಯಾಳುಗಳನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.



