ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಹಿರ್ಗಾನ ಗ್ರಾಮದ ಯುವಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ಯುವಕ ಸಂತೋಷ ಆಚಾರ್ಯ ಎಂದು ತಿಳಿಯಲಾಗಿದೆ.
ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಂಶ : ಪಿರ್ಯಾದಿದಾರರಾದ ಶ್ರೀಮತಿ ಇಂದಿರಾ (62) ಗಂಡ. ಮಂಜುನಾಥ ಆಚಾರ್ಯ ವಾಸ, ಸಂಪತ್ ನಿವಾಸ ಕಾನಂಗಿ ಹಿರ್ಗಾನ ಗ್ರಾಮ ಕಾರ್ಕಳ ಇವರ ಮಗ ಸಂತೋಷ ಆಚಾರ್ಯ (25) ಈತನು ದಿನಾಂಕ 10/11/2025 ರಂದು 9:15 ಗಂಟೆ ಆತನ ವಾಸದ ಮನೆಯಾದ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಕಾನಂಗಿ ಸಂಪತ್ ನಿವಾಸ ಎಂಬಲ್ಲಿದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ಸಂಬಂಧಿಕರ ಮನೆಗೆ ಸಹ ಹೋಗದೇ ಮೊಬೈಲ್ ಕರೆ ಸಹ ಸ್ವೀಕರಿಸದೇ ಕಾಣೆಯಾಗಿರುವುದಾಗಿದೆ.
ಈ ಬಗ್ಗೆ ಕಾರ್ಕಳ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 155/2025 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ



