ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ಸಮೀಪ ಪಿಕ್ ಅಪ್ ವಾಹನವೊಂದು ಅಪಘಾತವಾಗಿ ಹಿಂಬದಿ ಕುಳಿತ್ತಿದ್ದ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ನಡೆದಿದೆ.
ಸಾವನ್ನಪ್ಪಿದ ವ್ಯಕ್ತಿ ಮಂಜುನಾಥ್ ಎಂದು ತಿಳಿದು ಬಂದಿದೆ.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕಕರಣ ವಿವರ : ಫಿರ್ಯಾಧಿ ವೀರಭದ್ರ (52), ತಂದೆ: ನಾರಾಯಣ ಪೂಜಾರಿ, ವಾಸ: ಚಾರಕೊಡ್ಲು ಮನೆ ಬಿಜೂರು ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 30.11.2025 ರಂದು ಮಂಜುನಾಥ ಎಂಬುವರೊಂದಿಗೆ ಯಡ್ತರೆ ಗ್ರಾಮದ ದೊಂಬೆಯ ರುಕಜ್ಜಿ ಮನೆಯ ಗೊಬ್ಬರವನ್ನು KA47A1012 ಲೋಡ್ ಮಾಡಿ ದೊಂಬೆಯಿಂದ ಕರಾವಳಿ ಕಡೆಗೆ ಹೋಗುತ್ತಿದ್ದಾಗ ಸುಮಾರು ಬೆಳಿಗ್ಗೆ 11:45 ಗಂಟೆಗೆ ಫಿಕ್‌ಅಫ್ ವಾಹನವನ್ನು ಅದರ ಚಾಲಕ ವಿನಾಯಕ ಅತೀ ವೇಗ ಮತ್ತು ಅಜಾಗೂರುಕತೆಯಿಂದ ಚಲಾಯಿಸಿ ಪಡುವರಿ ಗ್ರಾಮದ ಮಾಸ್ತಿ ಮನೆ ತಿರುವಿನಲ್ಲಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಪಿಕ್ ಅಫ್ ನ ಹಿಂಬದಿ ಕುಳಿತ್ತಿದ್ದ ಫಿರ್ಯಾದಿದಾರರು ಮತ್ತು ಮಂಜುನಾಥ ರವರ ಪೈಕಿ ಮಂಜುನಾಥರವರು ಆಯ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ತಲೆಯ ಹಿಂಬಾಗಕ್ಕೆ ಗಂಭೀರ ಸ್ವರೂಪದ ರಕ್ತ ಗಾಯ ಉಂಟಾಗಿ ಪ್ರಜ್ಞೆ ಕಳೆದುಕೊಂಡವರನ್ನು ಚಿಕಿತ್ಸೆಯ ಬಗ್ಗೆ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮದ್ಯಾಹ್ನ 12:45 ಗಂಟೆ ಸುಮಾರಿಗೆ ಚಿಕಿತ್ಸೆ ಬರುವ ದಾರಿಯ ಮದ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 205/2025 ಕಲಂ;281 106 ಬಿಎನ್ ಎಸ್ ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



