ಭಟ್ಕಳ: ಹೋಮ್ ಸ್ಟೇ ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿಯಲ್ಲಿ ಸಂಭವಿಸಿದೆ.
ಮೃತ ಬಾಲಕನನ್ನು ಭಟ್ಕಳದ ಮೌಲವಿ ಶಾಹಿದುಲ್ಲಾಹ ಎಂಬವರ ಪುತ್ರ ಮೊಹಮ್ಮದ್ ಮುಸ್ತಾಕೀಮ್ ಶೇಖ್ (5) ಎಂದು ತಿಳಿಯಲಾಗಿದೆ.
ಕುಟುಂಬದವರ ಜೊತೆ ಆಟವಾಡುತ್ತಿದ್ದಾಗ ಬಾಲಕ ಕಾಲುಜಾರಿ ಈಜುಕೊಳಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಶಾಹಿದುಲ್ಲಾಹ ಹೋಮ್ ಸ್ಟೇ ಮನೆಯನ್ನು ಲೀಸ್‍ಗೆ ಪಡೆದಿದ್ದರು ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



