ಉಡುಪಿ : ಉಡುಪಿ ಜಿಲ್ಲಾ ವಕೀಲರ ಸಂಘದ 2025-27ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್ ಪುನಾರಾಯ್ಕೆಯಾಗಿರುತ್ತಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಶ್ರೀ ರೆನೋಲ್ಡ್ ಪ್ರವೀಣ್ ಕುಮಾರ್ ಇವರು ವಿವಿಧ ಅವಧಿಗಳಲ್ಲಿ 10 ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಕಳೆದ 2 ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದು, ಇದೀಗ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಚಲಾವಣೆಯಾದ 756 ಮತಗಳ ಪೈಕಿ 398 ಮತಗಳನ್ನು ಪಡೆದು. ತನ್ನ ಪ್ರತಿಸ್ಪರ್ಧಿ ಶ್ರೀ ಜಯಪ್ರಕಾಶ್ ಕೆದ್ಲಾಯ ಅವರನ್ನು 40 ಮತಗಳ ಅಂತರದಿಂದ ಸೋಲಿಸಿ ಜಯಶಾಲಿಯಾಗಿದ್ದಾರೆ.
ಚುನಾಯಿತರಾದ ಇತರ ಪದಾಧಿಕಾರಿಗಳಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ, ಉಪಾಧ್ಯಕ್ಷರಾಗಿ ದೇವದಾಸ್, ಜಂಟಿ ಕಾರ್ಯದರ್ಶಿಯಾಗಿ ಗಿರೀಶ್ ಎಸ್.ಪಿ., ಖಜಾಂಚಿಯಾಗಿ ಹಿಲ್ದಾ ಕ್ಯಾಸ್ಟಲಿನೋ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸಾವಿತ್ರಿ ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ದೀಪಕ್ ಕುಮಾರ್ ಪೂಜಾರಿ, ಭರತೀಶ, ದೀಪಾ ಕೆ. ಶೆಟ್ಟಿ, ವಿನಯ ಸುವರ್ಣ, ಆದಿತ್ಯ, ಮಂಜುನಾಥ ನಾಗಪ್ಪ ನಾಯ್ಕ, ನಾಗರ್ಜುನ, ಶಾರದ ಎನ್., ನಾಗರಾಜ ಉಪಾಧ್ಯ ಎಮ್, ಸಚಿನ್ ಕುಮಾರ್, ಗುರುಪ್ರಸಾದ್ ಜಿ.ಎಸ್. ಹರ್ಷಿತಾ, ನಾಗರಾಜ, ಸಂತೋಷ್ ಆಚಾರ್ಯ, ಗುರುರಾಜ್ ಜಿ.ಎಸ್., ಜಿ.ಎಸ್, ಕವಿತಾ, ನಾಗರಾಜ ಬಿ., ಸಂತೋಷ್ ಹೆಬ್ಬಾರ್ ಎ.. ಶ್ರೀಶ ಆಚಾರ್ ಕೆ. ಮತ್ತು ಗೀತಾ ಕೌಸಿಕ್ ಅಯ್ಕೆಯಾಗಿದ್ದಾರೆ.



