ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನ. 28ರಂದು ಉಡುಪಿಗೆ ಆಗಮಿಸುವ ಹಿನ್ನೆಲೆಯಲ್ಲಿ ಸಂಚಾರ ನಿಷೇಧ ಮತ್ತು ಬದಲಿ ಮಾರ್ಗದ ಕುರಿತು ಜಿಲ್ಲಾಡಳಿದ ಅಧಿಸೂಚನೆ ಹೊರಡಿಸಿದೆ. ನ. 28ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ಈ ಬದಲಾವಣೆ ಇರಲಿದೆ.
ಆದಿ ಉಡುಪಿ ಹೆಲಿಪ್ಯಾಡ್‌ನಿಂದ ಕರಾವಳಿ ಜಂಕ್ಷನ್ – ಬನ್ನಂಜೆ-ಶಿರಿಬೀಡು-ಕಲ್ಸಂಕ- ಶ್ರೀ ಕೃಷ್ಣಮಠದವರೆಗೆ ಯಾವುದೇ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಿದೆ.
ಮಣಿಪಾಲದಿಂದ ಉಡುಪಿ ಕಡೆಗೆ ಬರುವ ಎಲ್ಲ ವಾಹನಗಳು ಶಾರದಾ ಕಲ್ಯಾಣ ಮಂಟಪ- ಬೀಡಿನಗುಡ್ಡೆ ಮಾರ್ಗವಾಗಿ ಉಡುಪಿಗೆ ಬರಬೇಕು.
ಕುಂದಾಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕರಾವಳಿ ಫ್ಲೈ ಓವರ್ – ಅಂಬಲಪಾಡಿ – ಬ್ರಹ್ಮಗಿರಿ-ಜೋಡುಕಟ್ಟೆಮಾರ್ಗವಾಗಿ ಉಡುಪಿಗೆ ಬರಬೇಕು.
ಮಂಗಳೂರಿನಿಂದ ಉಡುಪಿಗೆ ಬರುವ ವಾಹನಗಳು ಕಿನ್ನಿಮೂಲ್ಕಿ ಸ್ವಾಗತಗೋಪುರ-ಜೋಡುಕಟ್ಟೆಯಾಗಿ ಉಡುಪಿಗೆ ಬರಬೇಕು.
ಅಂಬಾಗಿಲಿನಿಂದ ಗುಂಡಿಬೈಲು ಮಾರ್ಗವಾಗಿ ಉಡುಪಿಗೆ ಬರುವ ಎಲ್ಲ ವಾಹನಗಳು ಗುಂಡಿಬೈಲು – ದೊಡ್ಡಣಗುಡ್ಡೆ-ಎಂಜಿಎಂ-ಎಸ್ ಕೆಎಂ-ಬೀಡಿನಗುಡ್ಡೆ ಮೂಲಕ ಉಡುಪಿಗೆ ಬರಬೇಕು.
ಮಲ್ಪೆಯಿಂದ ಬರುವ ಎಲ್ಲ ವಾಹನಗಳು ಕುತ್ಪಾಡಿ ಮಾರ್ಗವಾಗಿ ಅಂಬಲಪಾಡಿ ಮೂಲಕ ಉಡುಪಿಗೆ ಬರಬೇಕು.
ಈ ನಿಷೇಧವು ವಿವಿಐಪಿ ವಾಹನ, ಸರಕಾರಿ ವಾಹನ ಮತ್ತು ಎಲ್ಲ ರೀತಿಯ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.



