ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಆಶೋಕ್ ಲೈಲಾಂಡ್ ವಾಹನದ ಜೊತೆ ಚಾಲಕ ಕೂಡ ನಾಪತ್ತೆಯಾದ ಘಟನೆ ನಡೆದಿದೆ.
ತಿರ್ಥೇಶ್ ಎಂಬವರ ವಾಹನ ನಾಪತ್ತೆಯಾಗಿದೆ.
ವಾಹನದ ಜೊತೆ ಪರಾರಿಯಾದ ಚಾಲಕ ಕಯಂ ಪಾಷಾ ಎಂದು ತಿಳಿದು ಬಂದಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ತಿರ್ಥೇಶ್ (35),ಕೋಡಿ ಗ್ರಾಮ, ಬ್ರಹ್ಮಾವರ ಇವರು 2 ತಿಂಗಳ ಹಿಂದೆ KA 47 A 2766 ನೇ ಅಶೋಕ್ ಲೈಲಾಂಡ್ ಬಾಡಾ ದೋಸ್ತ್ ವಾಹನವನ್ನು ಈಶ್ವರ ಗೊಂಡ ಎಂಬುವವರಿಂದ ಖರೀದಿಸಿದ್ದು ವಾಹನದ ಸಿಸಿ ಬದಲಾವಣೆ ಆಗಿರುವುದಿಲ್ಲ. ಪಿರ್ಯಾದಿದಾರರು ವಾಹನಕ್ಕೆ ಚಿಕ್ಕಮಂಗಳೂರಿನ ಕಯುಂ ಪಾಷಾ ಎಂಬುವವರನ್ನು ಚಾಲಕನಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದು, ದಿನಾಂಕ 15/11/2025 ರಂದು ಮದ್ಯಾಹ್ನ 4:00 ಗಂಟೆಗೆ KA-47-A-2766 ನೇ ವಾಹನವನ್ನು ಕೊಡವೂರು ಗ್ರಾಮದ ಮಲ್ಪೆ ಬಂದರಿನ ಬಳಿ ಇರುವ ಮತ್ಸ್ಯ ಸಿರಿ ಕಾಂಪ್ಲೆಕ್ಸ್‌ನ ಎದುರು ನಿಲ್ಲಿಸಿ ಕಯುಂ ಪಾಷಾ ನಲ್ಲಿ ಯಾವುದಾದರೂ ಬಾಡಿಗೆ ಬಂದಲ್ಲಿ ತಿಳಿಸುವಂತೆ ಹೇಳಿ ಆತನಿಗೆ ವಾಹನದ ಬೀಗ ಕೊಟ್ಟು ವಾಹನದಲ್ಲೇ ಮಲಗಲು ತಿಳಿಸಿ ಹೋಗಿದ್ದು ಪಿರ್ಯಾದಿದಾರರು ದಿನಾಂಕ 16/11/2025 ರಂದು ಬೆಳಿಗ್ಗೆ 8:00 ಗಂಟೆ ಸಮಯಕ್ಕೆ ಬಂದು ನೋಡಿದಾಗ ವಾಹನ ನಿಲ್ಲಿಸಿದ್ದ ಜಾಗದಲ್ಲಿ ಇರದೆ ಕಾಣೆಯಾಗಿರುತ್ತದೆ. ಚಾಲಕ ಕಯಂ ಪಾಷಾ ಕೂಡಾ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯೂ ವಾಹನ ಪತ್ತೆಯಾಗಿರುವುದಿಲ್ಲ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 125/2025, ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.



