ಸೂರತ್ : ಬಾಳಿ ಬದುಕಬೇಕಾಗಿದ್ದ ಯುವಕನೊಬ್ಬ ಸಾಮಾಜಿಕ ಜಾಲತಾಣದ ಹುಚ್ಚಿಗೆ ಇದೀಗ ಮಸಣ ಸೇರಿದ್ದಾನೆ.
ಹೌದು, 18 ವರ್ಷದ ಯುವಕ ಅತೀವೇಗದಲ್ಲಿ ಬೈಕ್ ಚಲಾಯಿಸಿ ಉಂಟಾದ ಅಪಘಾತದಲ್ಲಿ ಸಾವನಪ್ಪಿದ್ದ ಘಟನೆ ಸೂರತ್ ನಲ್ಲಿ ನಡೆದಿದೆ.
ಪಿಕೆಆರ್ ಬ್ಲಾಗರ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ 18 ವರ್ಷದ ಪ್ರಿನ್ಸ್ ಪಟೇಲ್ ಮೃತಪಟ್ಟ ಯುವಕ. ಫ್ರಿನ್ಸ್ ಗ್ರೇಟ್ ಲೈನರ್ ಸೇತುವೆಯಿಂದ ಬೈಕ್ ನ್ನು 140 ಕಿಲೋಮೀಟರ್ ವೇಗದಲ್ಲಿ ಓಡಿಸಿಕೊಂಡು ಬಂದಿದ್ದು, ಅದು ನಿಯಂತ್ರಣ ತಪ್ಪಿದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಬೈಕ್ ಅವಘಾತದ ಬಳಿಕ ಸುಮಾರು ನೂರು ಮೀಟರ್ ದೂರ ಹೋಗಿ ನಿಂತಿದ್ದರೆ. ಬೈಕ್ ನಿಂದ ಬಿದ್ದ ಫ್ರಿನ್ಸ್ ಅಪಘಾತದ ತೀವೃತೆಗೆ ಆತನ ತಲೆ ದೇಹದಿಂದ ಬೇರ್ಪಟ್ಟಿದೆ. ಅಪಘಾತದ ಸಮಯದಲ್ಲಿ ಪ್ರಿನ್ಸ್ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹೈ-ಸ್ಪೀಡ್ ಬೈಕ್ ಸವಾರಿ ವೀಡಿಯೊಗಳು ಮತ್ತು ರೀಲ್‌ಗಳನ್ನು ರಚಿಸಲು ಹೆಸರುವಾಸಿಯಾದ ಪ್ರಿನ್ಸ್ ಪಟೇಲ್, ತಮ್ಮ KTM ಸ್ಪೋರ್ಟ್ಸ್ ಬೈಕ್‌ಗೆ “ಲೈಲಾ” ಎಂದು ಕರೆಯುತ್ತಿದ್ದು, ತನ್ನನ್ನು ಮಜ್ನು ಎಂದು ಹೇಳುತ್ತಿದ್ದರು. ಫ್ರಿನ್ಸ್ ತಾಯಿ ಹಾಲು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ. ಫ್ರಿನ್ಸ್ ತಾಯಿಯ ಏಕೈಕ ಮಗ. ಅವರ ತಂದೆ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದಾರೆ. ತನ್ನ ಒಬ್ಬನೇ ಮಗನನ್ನು ಕಳೆದುಕೊಂಡು ಫಿನ್ರ್ಸ್ ತಾಯಿ ದುಃಖ ಹೇಳ ತೀರದಾಗಿತ್ತು.



