Home Karavali Karnataka ಮಲ್ಪೆ ಬಂದರು ಭೂಮಿ ಅಕ್ರಮ ಗುತ್ತಿಗೆ : ಸಿಪಿಎಂ ಖಂಡನೆ…!!

ಮಲ್ಪೆ ಬಂದರು ಭೂಮಿ ಅಕ್ರಮ ಗುತ್ತಿಗೆ : ಸಿಪಿಎಂ ಖಂಡನೆ…!!

ಉಡುಪಿ: ಮಲ್ಪೆ ಸೀ ವಾಕ್ ಪ್ರದೇಶದ ಸರಕಾರಿ ಬಂದರಿನ 37,554.55 ಚ.ಮೀ ಭೂಮಿಯನ್ನು ಶಾಸಕ ಯಶಪಾಲ್ ಸುವರ್ಣ ಅವರು ದಕ್ಷಿಣ ಕನ್ನಡ ಮೀನುಗಾರಿಕಾ ಫೆಡರೇಶನ್ ಹೆಸರಿನಲ್ಲಿ, ಸಾರ್ವಜನಿಕರಿಗೆ ಹಾಗೂ ಮಂಡಳಿಯ ನಿರ್ದೇಶಕರಿಗೆ ತಿಳಿಸದೇ ಅಕ್ರಮ ಒಳ ಒಪ್ಪಂದದ ಮೂಲಕ ಹಸ್ತಾಂತರಿಸಲು ಯತ್ನಿಸಿದ ಘಟನೆಗೆ ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.

ಜನಸಾಮಾನ್ಯರ ಬಳಕೆಗೆ ಮೀಸಲಾಗಬೇಕಾದ ಈ ಪ್ರದೇಶವನ್ನು ರಹಸ್ಯ ಒಪ್ಪಂದಗಳ ಮೂಲಕ ಅನ್ಯದೇಶಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಗಂಭೀರ ವಿಷಯ ಎಂದು ಸಿಪಿಎಂ ಆರೋಪಿಸಿದೆ.

ನವೆಂಬರ್ 15ರಂದು ಮಲ್ಪೆಯ ಸಾರ್ವಜನಿಕರು ಶಾಸಕರ ಮನೆಗೆ ಮುತ್ತಿಗೆ ಹಾಕಿ, ಪ್ರದೇಶವನ್ನು ಪ್ರವಾಸೋಧ್ಯಮ ಅಭಿವೃದ್ಧಿ ಪ್ರದೇಶವಾಗಿ ಘೋಷಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಈ ಹೋರಾಟಕ್ಕೆ ಸಿಪಿಎಂ ಬೆಂಬಲ ಘೋಷಿಸಿದೆ. ವಿವಾದಾತ್ಮಕ ಒಳ ಒಪ್ಪಂದದ ಪತ್ರವನ್ನು ತಕ್ಷಣವೇ ರದ್ದುಪಡಿಸಿ, ಮಲ್ಪೆ ಸಾರ್ವಜನಿಕರ ಹಕ್ಕುಗಳ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಿಪಿಎಂ ಉಡುಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಆಗ್ರಹಿಸಿದೆ.