Home Crime ಮಲ್ಪೆ : ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ…!!

ಮಲ್ಪೆ : ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ…!!

ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಯು ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಕೊಡವೂರು ಗ್ರಾಮದ ನಿವಾಸಿ ಮೇಘಾ ಎಂದು ತಿಳಿಯಲಾಗಿದೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ : ಪಿರ್ಯಾದುದಾರರಾದ ಕೃಷ್ಣ (45),ಕೊಡವೂರು ಗ್ರಾಮ, ಉಡುಪಿ ಇವರ ಮಗಳು ಮೇಘಾ 17 ವರ್ಷ 8 ತಿಂಗಳು ಇವರು ಕಿದಿಯೂರು ಶ್ಯಾಮಿಲಿ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ಕಳೆದ ಒಂದು ವರ್ಷದಿಂದ ಪೀಡ್ಸ್‌ ಖಾಯಿಲೆಯಿದ್ದು, ಈ ಬಗ್ಗೆ ಉಡುಪಿ ಮಿತ್ರಾ ಆಸ್ಪತ್ರೆ ಮತ್ತು ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಿದ್ದು, ಸ್ವಲ್ಪ ಮಟ್ಟಿಗೆ ಗುಣಮುಖಳಾಗಿದ್ದು, ಹೀಗಿರುತ್ತಾ ಪಿರ್ಯಾದಿದಾರರ ಮಗಳು ಪೀಡ್ಸ್‌ ಖಾಯಿಲೆಯಿಂದಲೋ ಅಥವಾ ಇನ್ನಾವುದೋ ಕಾರಣದಿಂದ ದಿನಾಂಕ 06/08/2025 ರಂದು ಸಂಜೆ 5:10 ಗಂಟೆಯಿಂದ 5:30 ಗಂಟೆ ನಡುವಿನ ಸಮಯದಲ್ಲಿ ಮನೆಯ ಎದುರು ಇರುವ ಸ್ನಾನಗೃಹದ ತಗಡು ಶೀಟಿನ ಮಾಡಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗೆ ಚೂಡಿದಾರ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 48/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.