Home Crime ಬೆಂಗಳೂರು : 20 ಲಕ್ಷ ರೂ. ಪಡೆಯುವಾಗ ಲೋಕಾ ಬಲೆಗೆ ಬಿದ್ದ ತೆರಿಗೆ ಇಲಾಖೆ ಅಧಿಕಾರಿ…!!

ಬೆಂಗಳೂರು : 20 ಲಕ್ಷ ರೂ. ಪಡೆಯುವಾಗ ಲೋಕಾ ಬಲೆಗೆ ಬಿದ್ದ ತೆರಿಗೆ ಇಲಾಖೆ ಅಧಿಕಾರಿ…!!

ಬೆಂಗಳೂರು : ತೆರಿಗೆ ವಂಚಿಸಿ ಕೋಟ್ಯಂತರ ಮೌಲ್ಯದ ಪಾನ್‌ ಮಸಾಲವನ್ನು ದೆಹಲಿಯಿಂದ ಬೆಂಗಳೂರಿಗೆ ಸಾಗಣೆ ಮಾಡುತ್ತಿದ್ದ ಜಾಲಕ್ಕೆ ನೆರವಾಗುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯನ್ನು ₹20 ಲಕ್ಷ ಲಂಚದ ಸಮೇತ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ವಾಣಿಜ್ಯ ತೆರಿಗೆ ಪರಿವೀಕ್ಷಕ ಎಂ.ಆ‌ರ್. ನಿಜಾನಂದಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.

ಖಾಸಗಿ ವ್ಯಕ್ತಿ ಮನೋಜ್ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ನಗರದ ನಾಗರಭಾವಿ ಬಳಿಯ ನಮ್ಮೂರ ತಿಂಡಿ ಹೊಟೇಲ್ ಬಳಿ ಮನೋಜ್ ಅವರಿಂದ ಆರೋಪಿ 20 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.