Home Crime ನಿಯಂತ್ರಣ ತಪ್ಪಿದ ಶಾಲಾ ಬಸ್‌ ಡಿವೈಡರ್‌ಗೆ ಢಿಕ್ಕಿ : ವಿದ್ಯಾರ್ಥಿಗಳಿಗೆ ಸಣ್ಣ ಗಾಯ…!!

ನಿಯಂತ್ರಣ ತಪ್ಪಿದ ಶಾಲಾ ಬಸ್‌ ಡಿವೈಡರ್‌ಗೆ ಢಿಕ್ಕಿ : ವಿದ್ಯಾರ್ಥಿಗಳಿಗೆ ಸಣ್ಣ ಗಾಯ…!!

ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲ ಸಮೀಪ ಖಾಸಗಿ ಶಾಲಾ ಮಕ್ಕಳ ಬಷ್ಟೊಂದು ಚಾಲಕನ ನಿಯಂತ್ರಣ ತಪ್ಪಿರಸ್ತೆ ವಿಭಾಜಕಕ್ಕೆ ಡಿಕ್ಕಿಯಾದ ಘಟನೆ ಕೆ.ಎಫ್.ಸಿ ಬಳಿ ಸಂಭವಿಸಿದೆ.

ಅಲ್-ಇಬಾದಾದ್ ಇಂಡಿಯನ್ ಸ್ಕೂಲ್‌ಗೆ ಸೇರಿದ ಬಸ್‌ ಇದಾಗಿದೆ. ಘಟನೆಯಿಂದಾಗಿ ಬಸ್ಸಿನಲ್ಲಿದ್ದ ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿವೈಡರ್ ಹಾಗೂ ಬಸ್ಸಿಗೆ ಹಾನಿಯಾಗಿದೆ.

ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.