Home Crime ಬೈಂದೂರು: ಜಾನುವಾರು ಕದ್ದು ಕಾರಿನಲ್ಲಿ ಸಾಗಾಟ : ಅಪಘಾತದ ಬಳಿಕ ಇಬ್ಬರು ಆರೋಪಿಗಳು ಪರಾರಿ…!!

ಬೈಂದೂರು: ಜಾನುವಾರು ಕದ್ದು ಕಾರಿನಲ್ಲಿ ಸಾಗಾಟ : ಅಪಘಾತದ ಬಳಿಕ ಇಬ್ಬರು ಆರೋಪಿಗಳು ಪರಾರಿ…!!

ಬೈಂದೂರು: ಮಾಂಸ ಮಾಡುವ ಉದ್ದೇಶದಿಂದ ಮೂರು ಗಂಡು ಕರುಗಳನ್ನು ಕದ್ದು ಕಾರಿನಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಅಪರಿಚಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ.

ದಿನಾಂಕ 08/11/2026ರ ರಾತ್ರಿ ಇಬ್ಬರು ಅಪರಿಚಿತ ವ್ಯಕ್ತಿಗಳು ಎಲ್ಲಿಂದಲೋ ಮೂರು ಗಂಡು ಕರುಗಳನ್ನು ಕದ್ದು, ಅವುಗಳ ಕಾಲುಗಳಿಗೆ ಹಗ್ಗ ಕಟ್ಟಿ ಹಿಂಸಾತ್ಮಕವಾಗಿ KA-35-N-9164 ಸಂಖ್ಯೆಯ ಸ್ವಿಫ್ಟ್ ಕಾರಿನ ಹಿಂಭಾಗದಲ್ಲಿ ತುಂಬಿಸಿಕೊಂಡಿದ್ದರು. ಬಳಿಕ ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ವೇಳೆ, ದಿನಾಂಕ 08/11/2026ರ ಬೆಳಗಿನ ಜಾವ ಸುಮಾರು 3:20 ಗಂಟೆಗೆ ಬೈಂದೂರು ಮೈಯಾಡಿ ಪ್ರದೇಶದಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ, ಪಿರ್ಯಾದಿದಾರರಾದ ಬಾಬುರಾವ್ (42) ಅವರ ಮನೆ ಸಮೀಪ ರಸ್ತೆಯ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದ ಶಬ್ದ ಕೇಳಿ ಸ್ಥಳಕ್ಕೆ ಬಂದ ಬಾಬುರಾವ್ ಅವರನ್ನು ಕಂಡ ಇಬ್ಬರು ಆರೋಪಿಗಳು ಕಾರಿನಿಂದ ಇಳಿದು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ  ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.