ಉಡುಪಿಯ ಅಂಬಲಪಾಡಿಯಲ್ಲಿ ಇಂದು ಶುಕ್ರವಾರ ರಂದು ನಟ ಹರೀಶ್ ರಾಯ್ ಅಂತಿಮ ದರ್ಶನದ ನಂತರ ಬೀಡಿನಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಿತು.
ಹರೀಶ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಲ್ಲಿರುವ ಅಂಜನಾಪುರದ ಮನೆಗೆ ತೆಗೆದುಕೊಂಡು ಹೋಗಿದ್ದು, ಅಲ್ಲಿ ಸಾರ್ವಜನಿಕರ ದರ್ಶನದ ಬಳಿಕ ಉಡುಪಿಗೆ ಪಾರ್ಥಿವ ಶರೀರ ರವಾನೆ ಮಾಡಿದ್ದರು.
ಬೆಂಗಳೂರಿನಲ್ಲಿ ವಾಸವಾಗಿದ್ದ ಹರೀಶ್ ಆಚಾರ್ಯ ಅವರ ಅಂಬಲಪಾಡಿಯ ನಿವಾಸದಲ್ಲಿ ಅವರ ತಾಯಿ ಮತ್ತು ಸಹೋದರ ವಾಸವಾಗಿದ್ದಾರೆ. ಅಂಬಲಪಾಡಿಯಲ್ಲೇ ಹರೀಶ್ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ.
ಇಂದು ಶುಕ್ರವಾರ (ನವೆಂಬರ್ 7) ಉಡುಪಿಯಲ್ಲಿ ಹರೀಶ್ ರಾಯ್ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬವರು ಮಾಹಿತಿ ನೀಡಿದ್ದಾರೆ.
ಹರೀಶ್ ರಾಯ್ ಅವರು ಅಂಗಾಂಗ ದಾನ ಮಾಡಲು ಇಚ್ಛಿಸಿದ್ದರು. ಆದರೆ ಕ್ಯಾನ್ಸರ್ ಇದ್ದ ಕಾರಣ ಅಂಗಾಂಗ ದಾನ ಸಾಧ್ಯವಾಗಲ್ಲವೆಂದು ವೈದ್ಯರು ಹೇಳಿದ್ದಾರೆ.
ಸ್ವರ್ಣೋದ್ಯಮ ನಡೆಸುವ ಕುಟುಂಬಕ್ಕೆ ಸೇರಿರುವ ಹರೀಶ್ ಚಿತ್ರರಂಗದಲ್ಲಿ ಪೋಷಕ ನಟರಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದರು.
ಚಿತ್ರನಟ, ಕೆಜಿಎಫ್ ಚಾಚಾ – ಲೆಜೆಂಡ್ ಓಂನ ರಾಯ್ ಹರೀಶ್ ಆಚಾರ್ಯ ಮೃತಪಟ್ಟಿದ್ದು ಉಡುಪಿಯಲ್ಲಿ ಮೃತ ದೇಹದ ಅಂತಿಮ ವಿಧಿ ವಿಧಾನ ನಡೆಯಿತು. ಅಂಬಲಪಾಡಿಯಲ್ಲಿರುವ ಮೂಲ ಮನೆಯಲ್ಲಿ ತುಳು ಶಿವಳ್ಳಿ ಮಹತ್ವ ಬ್ರಾಹ್ಮಣ ಸಂಪ್ರದಾಯದ ಮೂಲಕ ಮೃತದೇಹಕ್ಕೆ ಗೌರವ ಸಲ್ಲಿಸಲಾಯಿತು. ತುಳಸಿ ಕಟ್ಟೆ ಸಮೀಪ ಹರೀಶ್ ಆಚಾರ್ಯ ಮೃತ ದೇಹವನ್ನು ಶುಚಿಗೊಳಿಸುವ ಕೆಲಸ ನಡೆಸಿದ ಕುಟುಂಬಸ್ಥರು, ತೀರ್ಥವನ್ನು ನೀಡಿ ಅಗಲಿದ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥಿಸಿದರು. ಹರೀಶ್ ರಾಯ್ ಕಿರಿಯ ಪುತ್ರ ಮೃತ ದೇಹದ ಪಕ್ಕದಲ್ಲಿ ಕಣ್ಣೀರಿಡುತ್ತಾ, ಗಡ್ಡ ಮೀಸೆಯನ್ನು ಸವರುತ್ತಾ ಕೂತಿದ್ದನ್ನು ಕಂಡು, ಕುಟುಂಬಸ್ಥರು ಕಣ್ಣೀರು ಸುರಿಸಿದರು. ತನ್ನ ಮನೆಯಲ್ಲಿರುವ ಪ್ರೀತಿಯ ಶ್ವಾನವನ್ನು ಮೃತ ದೇಹದ ಬಳಿ ಸಹೋದರ ಸತೀಶ್ ಆಚಾರ್ಯ ಕರೆತಂದರು. ಮನೆಯ ನಾಯಿಯನ್ನು ಹರೀಶ್ ರಾಯ್ ಬಹಳವಾಗಿ ಪ್ರೀತಿಸುತ್ತಿದ್ದರು. ನನ್ನ ಸಹೋದರ ಆ ಕಾಲದಲ್ಲಿ ಉಡುಪಿಯ ಹೀರೋ ಆಗಿದ್ದ. ಕೃಷ್ಣಮಠದ ಪರ್ಯಾಯದ ಸ್ಟೇಜ್ ಪರ್ಫಾರ್ಮೆನ್ಸ್ ಕೊಡುತ್ತಿದ್ದ ದಿನಗಳನ್ನು ಸಹೋದರಿ ನೆನಪು ಮಾಡಿಕೊಂಡರು. ಅನಾರೋಗ್ಯವನ್ನು ಕಡೆಗಣಿಸಿದ್ದೆ ಸಾವಿಗೆ ಕಾರಣವಾಯಿತು ಎಂದು ನೊಂದುಕೊಂಡರು.











