Home Crime ಗೋಡೆಗೆ ಢಿಕ್ಕಿ ಹೊಡೆದ ಕಾರು : ನಾಲ್ವರು ಯುವಕರು ಸಾವು…!!

ಗೋಡೆಗೆ ಢಿಕ್ಕಿ ಹೊಡೆದ ಕಾರು : ನಾಲ್ವರು ಯುವಕರು ಸಾವು…!!

ಯಾದಗಿರಿ: ನಿರ್ಮಾಣ ಹಂತದ ಎಕ್ಸ್‌ಪ್ರೆಸ್ ವೇಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಇಬ್ರಾಹಿಂ ಡಿಬಿಎಲ್ ಕ್ಯಾಂಪ್ ಬಳಿ ನಡೆದಿದೆ.

ಗುರುರಾಜ್ ಚವ್ಹಾಣ್(35), ರೆಡ್ಡಿ ರಾಠೋಡ್(33), ಗೋವಿಂದ ಚವ್ಹಾಣ್(28) ಮತ್ತು ಕುಮಾರ್ ರಾಠೋಡ್(26) ಮೃತರು.

ಅಪಘಾತ ಸ್ಥಳಕ್ಕೆ ಎಸ್‌ಪಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಿಂಗೇರಿ ತಾಂಡಾದ ಓರ್ವ ಯುವಕ ಸೇರಿ ಮಲ್ಹಾರ್ ತಾಂಡಾದ ಮೂವರು ನಿವಾಸಿಗಳು ಕಲಬುರಗಿ ಜಿಲ್ಲೆಯ ಜೇವರ್ಗಿಯಿಂದ ಯಾದಗಿರಿ ಕಡೆಗೆ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ನಿರ್ಮಾಣ ಹಂತದ ಚೆನ್ನೈ-ಸೂರತ್ ಎಕ್ಸ್‌ಪ್ರೆಸ್‌ ವೇನಲ್ಲಿ ವೇಗವಾಗಿ ಬಂದ ಕಾರು ರಸ್ತೆ ಪಕ್ಕದ ಗೋಡೆಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಿಂದ ನಾಲ್ವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಅಪಘಾತ ಸಂಭವಿಸಿದೆ.