ಕೋಟ: ಪಾರಂಪಳ್ಳಿ ಗ್ರಾಮದ ಮಸೀದಿ ಬಳಿಯ ಬೀಚ್ ಬಳಿ ವಾಸವಿದ್ದ ಮೊಹಮ್ಮದ್ ಇಕ್ಬಾಲ್ (46) ಅವರು ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ನಡೆದಿದೆ.
ಮೃತರು ಮೂಲತಃ ಪಡುಕೆರೆ, ಕೋಟತಟ್ಟು ಗ್ರಾಮದವರು. ಕಳೆದ ಒಂದು ವರ್ಷದಿಂದ ಪತ್ನಿಯ ಮನೆ ಪಾರಂಪಳ್ಳಿಯಲ್ಲಿ ವಾಸವಿದ್ದರು.
ಅ.19 ರಂದು ಬೆಳಗಿನ ಜಾವ 3:40ಕ್ಕೆ ಮಗ ಇಃಝಾನ್ ತಾಯಿಯ ಅಕ್ಕ ಬಲ್ಕೀಸ್ (49) ಅವರಿಗೆ ಕರೆ ಮಾಡಿ ತಂದೆಗೆ ಆರೋಗ್ಯ ಸರಿ ಇಲ್ಲ, ಕೋಟೇಶ್ವರದ ಎನ್.ಆರ್.ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಬೆಳಗಿನ ಜಾವ 4 ಗಂಟೆಗೆ ಆಸ್ಪತ್ರೆಗೆ ಹೋಗಿ ನೋಡಿದಾಗ ವೈದ್ಯರು ಇಕ್ಬಾಲ್ ಬೆಳಗಿನ ಜಾವ 3:50ಕ್ಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇಕ್ಬಾಲ್ ಈ ಹಿಂದೆ ಪತ್ನಿ ಹಾಗೂ ಪತ್ನಿಯ ಮನೆಯವರೊಂದಿಗೆ ಆಗಾಗ್ಗೆ ಗಲಾಟೆ ಆಗುತ್ತಿದೆ ಎಂದು ಅಕ್ಕನ ಬಳಿ ನೊಂದು ಹೇಳಿಕೊಳ್ಳುತ್ತಿದ್ದರು. ಅ.14 ರಂದು ರಾತ್ರಿ ಅಬ್ದುಲ್ ರಜಾಕ್ ಎಂಬವರು ಮನೆಗೆ ಬಂದಾಗ ಗಲಾಟೆ ನಡೆದಿದ್ದು, ಅರ್ಧ ಗಂಟೆ ನಂತರ ಮನೆಗೆ ಬಂದ ಇಕ್ಬಾಲ್ ಅವರ ಬನಿಯನ್ ಹರಿದಿತ್ತು. ದೂರು ನೀಡುವುದಾಗಿ ಹೇಳಿದಾಗ ಕುಟುಂಬಸ್ಥರು ಮಾತನಾಡಿ ಬಗೆಹರಿಸೋಣ ಎಂದು ತಿಳಿಸಿದ್ದರು.
ಸಾವಿನಲ್ಲಿ ಸಂಶಯವಿದ್ದು ತನಿಖೆ ನಡೆಸುವಂತೆ ಸಹೋದರಿ ಬಲ್ಕೀಸ್ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಕ್ರಮಾಂಕ 44/2026 ಕಲಂ 194(3)(iv) BNSS ರಂತೆ ಪ್ರಕರಣ ದಾಖಲಾಗಿದೆ.



