Home Crime ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು…!!

ವ್ಯಕ್ತಿ ನಾಪತ್ತೆ : ಪ್ರಕರಣ ದಾಖಲು…!!

ಬೈಂದೂರು : ಉಡುಪಿ ಜಿಲ್ಲೆಯ  ಬೈಂದೂರು ದೊಂಬೆ ಪಡುವರಿ ಗ್ರಾಮದಲ್ಲಿ ವಾಸವಾಗಿಕೊಂಡಿದ್ದ ನವೀನ್ ಜಂಬವಾಳಿ (38) ಎನ್ನುವ ವ್ಯಕ್ತಿಯು ಅಕ್ಟೋಬರ್ 17 ರಂದು ತನ್ನ ಮನೆ ಅಂಕೋಲಾಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದು, ಅಲ್ಲಿಗೂ ಹೋಗದೆ, ವಾಪಾಸು ಮನೆಗೂ ಬಾರದೇ ನಾಪತ್ತೆಯಾಗಿರುತ್ತಾರೆ.

5 ಅಡಿ 6 ಇಂಚು ಎತ್ತರ ಸಾಧಾರಣ ಶರೀರ, ಕೋಲುಮುಖ, ಎಣ್ಣೆ ಮೈಬಣ್ಣ ಹೊಂದಿದ್ದು ಕೊಂಕಣಿ ಹಾಗೂ ಕನ್ನಡ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬೈಂದೂರು ಪೊಲೀಸ್ ಠಾಣೆ: (08254)251033, 9480805459, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ: (08254)251031, 9480805434, ಕಂಟ್ರೋಲ್ ರೂಂ: 100(0820)2526444 ಅನ್ನು ಸಂಪರ್ಕಿಸುವಂತೆ ಬೈಂದೂರು ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.