Home Crime ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ…!!

ಬ್ಯಾಂಕ್ ನಲ್ಲಿ ನಕಲಿ ಚಿನ್ನ ಅಡವಿಟ್ಟು ವಂಚನೆ…!!

ಉಡುಪಿ: ನಗರದ ಬ್ಯಾಂಕ್ ಒಂದರಲ್ಲಿ ವ್ಯಕ್ತಿಯೋರ್ವ ನಕಲಿ ಚಿನ್ನಾಭರಣಗಳನ್ನು‌ ಅಡವಿಟ್ಟು ನಗದು ಪಡೆದುಕೊಂಡು ವಂಚನೆಗೈದ ಘಟನೆ ನಡೆದಿದೆ.

ವಂಚನೆ ಮಾಡಿದ ವ್ಯಕ್ತಿ ಅಭಿಷೇಕ್ ಗೌಡ ಎಂದು ಗುರುತಿಸಲಾಗಿದೆ.

ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ದಿನಾಂಕ 18/06/2025 ರಂದು ಪುನೀತ್ ಆನಂದ ಕೋಟ್ಯಾನ್ ಎಂಬಾತನು ಪಿರ್ಯಾದಿದಾರರಾದ ಅಭಿಷೇಕ್‌ ಗೌಡ (28), ಶಾಖಾಧಿಕಾರಿ,ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಉಡುಪಿ ಶಾಖೆ, ಮಹಾಲಕ್ಷ್ಮೀ ಟವರ್ಸ್‌ , ಕೋರ್ಟ್‌ ರಸ್ತೆ, ಬ್ರಹ್ಮಗಿರಿ, ಉಡುಪಿ ಇವರ ಬ್ಯಾಂಕಿಗೆ ಬಂದು 50 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ 3,20,000/- ರೂಪಾಯಿಗಳನ್ನು ಪಡೆದುಕೊಂಡಿರುತ್ತಾರೆ ಹಾಗೂ ದಿನಾಂಕ 02/07/2025 ರಂದು ಸುಮಾರು 177.40 ಚಿನ್ನಾಭರಣಗಳನ್ನು ಅಡವಿಟ್ಟು 9,99,000/- ರೂಪಾಯಿಗಳನ್ನು ಪಡೆದುಕೊಂಡಿರುತ್ತಾರೆ. ಕೆಲವು ದಿನಗಳ ಹಿಂದೆ ಪಿರ್ಯಾದಿದಾರರಿಗೆ ಪುನೀತ್ ಆನಂದ ಕೋಟ್ಯಾನ್ ವಿವಿಧ ಬ್ಯಾಂಕಿನಲ್ಲಿ ನಕಲಿ ಚಿನ್ನಗಳನ್ನು ಅಡವಿಟ್ಟು ಸಾಲ ಪಡೆದುಕೊಂಡಿರುವ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ. ಪಿರ್ಯಾದಿದಾರರ ಬ್ಯಾಂಕಿನಲ್ಲಿ ಪುನೀತ್ ಆನಂದ ಕೋಟ್ಯಾನ್ ಅಡವಿಟ್ಟಿದ್ದ ಚಿನ್ನಾಭರಣಗಳು ನಕಲಿಯೋ ಅಥವಾ ಅಸಲಿಯೋ ಎಂಬ ಬಗ್ಗೆ ತಿಳಿಯಲು ಪರೀಕ್ಷೆಯನ್ನು ನಡೆಸಿದಾಗ ಚಿನ್ನಾಭರಣಗಳು ನಕಲಿ ಎಂದು ಧೃಡಪಟ್ಟಿರುತ್ತವೆ. ಆರೋಪಿ ಪುನೀತ್ ಆನಂದ ಕೋಟ್ಯಾನ್ ಬ್ಯಾಂಕಿನಿಂದ ಚಿನ್ನಾಭರಣಗಳ ಮೇಲೆ ಸಾಲವನ್ನು ಪಡೆಯುವ ಸಮಯ ನಕಲಿ ಚಿನ್ನಾಭರಣಗಳನ್ನು ಅಸಲಿ ಚಿನ್ನಗಳೆಂದು ತಿಳಿಯುವ ಹಾಗೆ ಮಾಡಿ ಬ್ಯಾಂಕಿನಿಂದ ಒಟ್ಟಾರೆಯಾಗಿ 13,19,000/- ರೂಪಾಯಿ ಸಾಲವನ್ನು ಪಡೆದು ಮೋಸ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 195/2025 ಕಲಂ: 316(2) 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ