Home Karavali Karnataka ಪ್ರಮೋದ ಕರಣಂ ಅವರ ಹುಟ್ಟು ಸಾವುಗಳ ನಡುವೆ ಕೃತಿ ಲೋಕಾರ್ಪಣೆ…!!

ಪ್ರಮೋದ ಕರಣಂ ಅವರ ಹುಟ್ಟು ಸಾವುಗಳ ನಡುವೆ ಕೃತಿ ಲೋಕಾರ್ಪಣೆ…!!

ಉಡುಪಿ : ನಗರದ ಸೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿಯು ಆಯೋಜಿಸಿರುವ ಕನ್ನಡ ಪುಸ್ತಕ ರಿಯಾಯಿತಿ ಮಾರಾಟ ಮೇಳದಲ್ಲಿ ಪ್ರಮೋದ ಕರಣಂ ಅವರ ಹುಟ್ಟು ಸಾವುಗಳ ನಡುವೆ ಎಂಬ ಕೃತಿಯನ್ನು ಲೋಕಾರ್ಪಣೆ ಭಾನುವಾರ ಎಂ.ಕೆ. ಹರಿಚರಣ ತಿಲಕ್ ಬಿಡುಗಡೆ ಮಾಡಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಅಧ್ಯಕ್ಷತೆ ವಹಿಸಿದ್ದರು. ಉಪಸಮಿತಿ ಸದಸ್ಯರಾದ ರಾಜಶೇಖರ
ಕದಂಬ, ಸುಚಿತ್ರಾ ಹೆಗಡೆ, ಡಾ.ಸಿ.ಡಿ. ಪರಶುರಾಮ್, ಎಂ.ಚಂದ್ರಶೇಖರ್, ಡಾ.ಎಂ. ಮಹೇಶ್ ಚಿಕ್ಕಲ್ಲೂರು ಮೊದಲಾದವರು ಉಪಸ್ಥಿತರಿದ್ದರು.