Home Crime ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಸಮುದ್ರಕ್ಕೆ ಜಾರಿ ಬಿದ್ದ ವಿಮಾನ : ಇಬ್ಬರು ಮೃತ್ಯು…!!

ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಸಮುದ್ರಕ್ಕೆ ಜಾರಿ ಬಿದ್ದ ವಿಮಾನ : ಇಬ್ಬರು ಮೃತ್ಯು…!!

ಹಾಂಕಾಂಗ್: ದುಬೈನಿಂದ ಹಾಂಕಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸರಕು ಸಾಗಾಣಿಕೆ ವಿಮಾನವೊಂದು ಸೋಮವಾರ ಮುಂಜಾನೆ ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಸಮುದ್ರಕ್ಕೆ ಜಾರಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.

ಸೋಮವಾರ ಮುಂಜಾನೆ 3.50ರ ವೇಳೆಗೆ ಈ ಘಟನೆ ಸಂಭವಿಸಿದ್ದು, ಮೃತಪಟ್ಟ ಇಬ್ಬರು ಈ ದುರಂತದ ಸಮಯದಲ್ಲಿ ವಿಮಾನ ನಿಲ್ದಾಣದ ವಾಹನದಲ್ಲಿದ್ದರು ಎಂದು ಹೇಳಲಾಗಿದೆ. ಎಮಿರೇಟ್ ವಿಮಾನ ಸಂಖ್ಯೆಯಡಿ ಈ ಕಾರ್ಗೊ ವಿಮಾನ ಕಾರ್ಯಾಚರಣೆ ನಡೆಸುತ್ತಿತ್ತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿದು ಬಂದಿದೆ.

ವಿಮಾನಯಾನ ಸಂಸ್ಥೆ ತಕ್ಷಣಕ್ಕೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯ್ಟರ್ಸ್ ವರದಿ ಮಾಡಿದೆ.

ವಿಮಾನದಲ್ಲಿದ್ದ ಎಲ್ಲ ನಾಲ್ಕು ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ವಿಮಾನ ನಿಲ್ದಾಣ ಸಿಬ್ಬಂದಿಯ ಪೈಕಿ ಒಬ್ಬರನ್ನೂ ರಕ್ಷಿಸಲಾಗಿದೆ. ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಹೇಳಿದ್ದಾರೆ.

ವಿಮಾನ ಪತ್ತೆ ಸೇವೆಗಳ ಸಂಸ್ಥೆ ಫ್ಲೈಟ್ ರಾಡರ್ 24 ಪ್ರಕಾರ, ರನ್‌ವೇಯಿಂದ ಹೊರಹೋಗಿ ಅಪಘಾತಕ್ಕೀಡಾದ ವಿಮಾನ ಬೋಯಿಂಗ್ 747 ಸರಕು ಸಾಗಾಣಿಕೆ ವಿಮಾನವಾಗಿದೆ. ಅಪಘಾತದ ನಂತರ, ಸರಕು ವಿಮಾನವು ಜಾರಿದ ರನ್‌ವೇಯನ್ನು ವಿಮಾನ ನಿಲ್ದಾಣ ಮುಚ್ಚಿದೆ.