Home Crime ಮಲ್ಪೆ : ಅಕ್ರಮ ಕೆಂಪು ಕಲ್ಲುಗಳ ಸಾಗಾಟ : ಲಾರಿ ವಶಕ್ಕೆ…!!

ಮಲ್ಪೆ : ಅಕ್ರಮ ಕೆಂಪು ಕಲ್ಲುಗಳ ಸಾಗಾಟ : ಲಾರಿ ವಶಕ್ಕೆ…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಸಮೀಪ ಲಾರಿಯಲ್ಲಿ ಅಕ್ರಮವಾಗಿ ಕೆಂಪು ಸಾಗಿಸುತ್ತಿರುವಾಗ ಮಲ್ಪೆ ಪೊಲೀಸರು ಲಾರಿ ಸಹಿತ ಕೆಂಪು ಕಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ.

ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ 03/11/2025 ರಂದು ಅನಿಲ ಕುಮಾರ್‌ ಡಿ, ಪೊಲೀಸ್‌ ಉಪನಿರೀಕ್ಷಕರು (ಕಾ&ಸು), ಮಲ್ಪೆ ಪೊಲೀಸ್ ಠಾಣೆ‌ ಇವರು ಸಿಬ್ಬಂದಿಯವರೊಂದಿಗೆ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಕೆಮ್ಮಣ್ಣು ಕಂಬಳತೋಟ ಎಂಬಲ್ಲಿ ಸಾರ್ವಜನಿಕ ರಸ್ತೆಯಲ್ಲಿ 16:40 ಗಂಟೆಗೆ ವಾಹನ ತಪಾಸಣೆ ಮಾಡುತ್ತಿರುವಾಗ ಸಂತೆಕಟ್ಟೆ ಕಲ್ಯಾಣ್‌ಪುರ ಕಡೆಯಿಂದ ಒಂದು ಲಾರಿಯನ್ನು ಅದರ ಚಾಲಕನು ಅನುಮಾನಾಸ್ಪದ ರೀತಿಯಲ್ಲಿ ಚಲಾಯಿಸಿಕೊಂಡು ಬಂದಿದ್ದು, ನಿಲ್ಲಿಸುವಂತೆ ಸೂಚನೆ ಮಾಡಿದಾಗ, ಚಾಲಕನು ವಾಹನ ನಿಲ್ಲಿಸಿ ಸ್ಥಳದಿಂದ ಓಡಿ ಹೋಗಿದ್ದು ಲಾರಿಯನ್ನು ಪರಿಶೀಲಿಸಲಾಗಿ ಯಾವುದೇ ಪರವಾನಿಗೆ ಇಲ್ಲದೆ ಕೆಂಪು ಲ್ಯಾಟರೈಟ್‌ ಕಲ್ಲುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿರುತ್ತದೆ. ಅದರಂತೆ ಪಂಚರನ್ನು ಬರಮಾಡಿಕೊಂಡು KA-20-A-3654 ನೇ ಟಾಟಾ ಕಂಪೆನಿಯ ಲಾರಿ ಮತ್ತು 350 ಕೆಂಪು ಲ್ಯಾಟರೈಟ್‌ ಕಲ್ಲುಗಳು ಸ್ವಾಧೀನಪಡಿಸಿಕೊಂಡಿರುವುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 118/2025 ಕಲಂ: 303(2) BNS, 4, 4A, 21 MMDR ACT ರಂತೆ ಪ್ರಕರಣ ದಾಖಲಾಗಿರುತ್ತದೆ.