Home Karavali Karnataka ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ಪ್ರವಚನ ಸಪ್ತಾಹ ಸಂಪನ್ನ…!!

ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ : ಪ್ರವಚನ ಸಪ್ತಾಹ ಸಂಪನ್ನ…!!

ಉಡುಪಿ : ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಆಡಳಿತ ಮಂಡಳಿ ಮತ್ತು ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಆಶ್ರಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡ ಜ್ಞಾನ ದೀಪುಸವೂ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಏಳು ದಿನಗಳ ಪರ್ಯಂತ “ಸುಂದರ ಕಾಂಡ ” ವಿಷಯದ ಬಗ್ಗೆ ಪ್ರವಚನವನ್ನು ನಡೆಸಿಕೊಟ್ಟ ವಿದ್ವಾನ್ ಶ್ರೀ ಹೆರ್ಗ ಹರಿಪ್ರಸಾದ್ ಭಟ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ಪ್ರೊಫೆಸರ್ ಷಣ್ಮುಖ ಹೆಬ್ಬಾರ್ ಅವರು ಕಾರ್ತಿಕ ಮಾಸ ಜ್ಞಾನ ದೀಪೋತ್ಸವದ ಮಹತ್ವ ತಿಳಿಸಿದರು. ದೇವಸ್ಥಾನ ಆಡಳಿತ ಮಂಡಳಿಯ ಶ್ರೀ ರಮೇಶ್ ಬಾರಿತ್ತಾಯ, ಅರ್ಚಕ ದಿವಾಕರ ಐತಾಳ್, ನಿವೃತ್ತ ಪ್ರಾಂಶುಪಾಲ ಶ್ರೀ ಸದಾಶಿವ ರಾವ್, ಸಮಿತಿಯ ಪದಾಧಿಕಾರಿಗಳಾದ ರಂಗನಾಥ ಸಾಮಗ, ಅಜಿತ್ ಬಿಜಾಪುರ್ ,ಲಕ್ಷ್ಮೀನಾರಾಯಣ ಆಚಾರ್ ಉಪಸ್ಥಿತರಿದ್ದರು. ಶ್ರೀಪತಿ ಭಟ್, ಪ್ರಕಾಶ್ ಆಚಾರ್, ವೇದವ್ಯಾಸ ಆಚಾರ್, ರಂಗನಾಥ ಸರಳಾಯ, ಚಂದ್ರಕಾಂತ್, ಶ್ಯಾಮಲಾ ಭಟ್, ವಸುಧಾ , ರಾಧಿಕಾ, ರೂಪ ,ಕವಿತಾ ಸಹಕರಿಸಿದರು.

ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ ಭಟ್ ಎಲ್ಲರನ್ನು ಸ್ವಾಗತಿಸಿ, ಕಾರ್ಯದರ್ಶಿ ನಾಗರಾಜ ಭಟ್ ವಂದಿಸಿ,ಪೂರ್ವ ಅಧ್ಯಕ್ಷ ಶ್ರೀ ಶ್ರೀನಿವಾಸ ಬಲ್ಲಾಳ್ ಕಾರ್ಯಕ್ರಮ ನಿರ್ವಹಿಸಿದರು.