ಉಡುಪಿ: ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಮೂಲತಃ ಆಂದ್ರಪ್ರದೇಶ ರಾಜ್ಯ ನೆಲ್ಲೂರು ಜಿಲ್ಲೆ ಕೊತ್ತಬಂಗಾರಿಪಾಲಂ ನಿವಾಸಿ ವಯಾಲ್ ರವಿ ಕುಮಾರ್ (21) ಎಂಬ ಯುವಕನು ಮೇ 20 ರಂದು ಮೀನುಗಾರಿಕೆಗೆ ಮಂಗಳೂರು ಬಂದರಿನಿಂದ ಬೋಟ್‌ನಲ್ಲಿ ಹೊರಟು, ಗಂಗೊಳ್ಳಿ ಬಂದರು ಕಡೆ ಬರುತ್ತಿರುವಾಗ ಮೇ 25 ರಂದು ವಿಪರೀತ ಗಾಳಿಯಿಂದ ಸಮಸ್ಯೆ ಉಂಟಾಗಿ ರಾತ್ರಿ 10.30 ರ ಸುಮಾರಿಗೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು, ನಾಪತ್ತೆಯಾಗಿದ್ದು, ಬೋಟಿನ ಇತರೆ ಮೀನುಗಾರರು ಎಷ್ಟೇ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.
165 ಸೆಂ.ಮೀ ಎತ್ತರ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ತೆಲುಗು ಭಾಷೆ ಮಾತನಾಡುವ ಸದ್ರಿ ವ್ಯಕ್ತಿಯ ಮಾಹಿತಿ ದೊರೆತಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆ ದೂ.ಸಂಖ್ಯೆ: 08254-265333, ಮೊ.ನಂ: 9480805457, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ: 9480805434 ಹಾಗೂ ಕಂಟ್ರೋಲ್ ರೂಂ. 112 (08254-232338) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.




