Home Crime ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣು…!!

ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣು…!!

ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ  ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಆತ್ಮಹತ್ಯೆಗೆ ಶರಣಾದ ಯುವಕ ಹನುಮಂತ ಎಂದು ತಿಳಿದು ಬಂದಿದೆ.

ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ಪಿರ್ಯಾದಿದಾರರಾದ ಬಸವ ರಾಜ್‌‌‌‌ (19),ಬಳ್ಳಾರಿ ಇವರ ಜೊತೆ ಹನುಮಂತ (19) ಎಂಬುವವರು ಕೊಲ್ಲೂರು ಮಹಾಲಕ್ಷ್ಮಿ ಹೊಟೇಲ್‌‌ ನಲ್ಲಿ ಅಡುಗೆ ಸಹಾಯಕ ಕೆಲಸ ಮಾಡಿಕೊಂಡಿದ್ದು, ದಿನಾಂಕ 30/10/2025 ರಂದು ಬೆಳಿಗ್ಗೆ 8:15 ಗಂಟೆಗೆ ಹನುಮಂತನು ಕೆಲಸ ಮಾಡುತ್ತಿದ್ದ ಹೊಟೇಲ್‌‌ ನಿಂದ ತಲೆ ನೋವು ರೂಮ್‌‌ಗೆ ಹೋಗಿ ರೆಸ್ಟ್‌‌ ಮಾಡುತ್ತೇನೆ ಎಂದು ಹೇಳಿ ವಸತಿ ಗೃಹದ ರೂಮ್‌ಗೆ ಹೋಗಿರುತ್ತಾನೆ. ಬಳಿಕ ಹೊಟೇಲ್‌ ನವರು ಹನುಮಂತನ ಮೊಬೈಲ್‌‌ಗೆ ಪೋನ್‌ ಮಾಡಿದಾಗ ರಿಸೀವ್‌‌ ಮಾಡದ ಕಾರಣ, ಹೊಟೇಲ್‌‌‌ ನವರ ಸೂಚನೆಯಂತೆ ಪಿರ್ಯಾದಿದಾರರು ಬೆಳಿಗ್ಗೆ 9:20 ಗಂಟೆಗೆ ರೂಮ್‌‌ಗೆ ಬಂದು ನೋಡಲಾಗಿ ಚಿಲಕ ಹಾಕಿದ್ದು, ಕೂಗಿ ಕರೆದು ಬಾಗಿಲು ಬಡಿದಾಗ ಯಾವುದೇ ಉತ್ತರ ಬಾರದಿದ್ದ ಕಾರಣ ರೂಮ್‌‌‌ನ ವೆಂಟಿಲೇಶನ್ ಕಿಟಕಿ ತೆರೆದು ನೋಡಲಾಗಿ ಹನುಮಂತನು ರೂಮ್‌‌ ಪ್ಯಾನ್‌‌‌‌ಗೆ ನೈಲಾನ್‌ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದು, ಜೀವ ಇರಬಹುದು ಎಂದು ಪಿರ್ಯಾದಿದಾರರು ತಿಳಿದುಕೊಂಡು ಇತರೆ ಜನರ ಸಹಾಯದಿಂದ ರೂಮ್‌‌‌‌ನ ಬಾಗಿಲನ್ನು ಕಬ್ಬಿಣದ ಸಲಾಕೆಗಳಿಂದ ಹಿಗ್ಗಿಸಿ ಒಡೆದು ಒಳಗೆ ಹೋಗಿ ನೋಡಲಾಗಿ ಹನುಮಂತನು ನೈಲಾನ್ ಹಗ್ಗವನ್ನು ರೂಮ್‌‌ನ ಪ್ಯಾನ್‌‌‌ಗೆ ಕಟ್ಟಿಕೊಂಡು ಇನ್ನೊಂದು ತುದಿಯನ್ನು ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದು ತಿಳಿಯಿತು. ಹನುಮಂತನು ಇತ್ತೀಚಿಗೆ ಸಪ್ಪೆಯಾಗಿ ಇರುತ್ತಿದ್ದು ಯಾವುದೋ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ಬಿಗಿದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 26/2025 ಕಲಂ: 194 (3) (iv) BNSS ರಂತೆ ಪ್ರಕರಣ ದಾಖಲಾಗಿರುತ್ತದೆ.