Home Crime ಕಾರ್ಕಳ: ಬೈಕ್ ಸ್ಕಿಡ್ ಆಗಿ ಬಿದ್ದು ವಿದ್ಯಾರ್ಥಿ ಸಾವು…!!

ಕಾರ್ಕಳ: ಬೈಕ್ ಸ್ಕಿಡ್ ಆಗಿ ಬಿದ್ದು ವಿದ್ಯಾರ್ಥಿ ಸಾವು…!!

ಕಾರ್ಕಳ:‌ ಉಡುಪಿ ಜಿಲ್ಲೆಯ ‌ಕಾರ್ಕಳ ದೇವಸ್ಥಾನ ವೀಕ್ಷಣೆಗೆ ತೆರಳಿದ್ದ ಯುವಕನ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಾಳ ಗ್ರಾಮದ ಬಳಿ ನಡೆದಿದೆ.

ಮೃತನನ್ನು ಬಾಗಲಕೋಟೆ ಮೂಲದ ಗಣೇಶ್ ರಾಥೋಡ್ (22) ಎಂದು ತಿಳಿದು ಬಂದಿದೆ.

ಈತ ತನ್ನ ಪಲ್ಸರ್ ಬೈಕ್ (KA-19-HV-8171) ನಲ್ಲಿ ಸ್ನೇಹಿತರೊಂದಿಗೆ ಮಂಗಳೂರಿನಿಂದ ಕಾರ್ಕಳ-ಶೃಂಗೇರಿ ಮಾರ್ಗವಾಗಿ ತೆರಳುತ್ತಿದ್ದ ಎನ್ನಲಾಗಿದೆ.

ಅ.14 ರಂದು ಬೆಳಿಗ್ಗೆ 10:30ರ ಸುಮಾರಿಗೆ ಮಾಳ ಚೆಕ್‌ಪೋಸ್ಟ್‌ನಿಂದ ಸುಮಾರು 6 ಕಿ.ಮೀ ಮುಂದೆ ಬಜಗೋಳಿ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಉರುಳಿ ಬಿದ್ದಿದೆ. ಪರಿಣಾಮ ಗಣೇಶ್‌ಗೆ ಗಂಭೀರ ಗಾಯಗಳಾಗಿದ್ದು, ಹಿಂಬದಿ ಸವಾರ್ತಿ ಶಿಲ್ಪಾ ಯಾನೆ ಶಿವಾನಿ ಅವರಿಗೆ ಕಾಲಿಗೆ ಗಾಯವಾಗಿದೆ.

ಗಾಯಾಳುಗಳನ್ನು ತಕ್ಷಣ ಸ್ನೇಹಿತರು ಆಂಬ್ಯುಲೆನ್ಸ್ ಮೂಲಕ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶಿಲ್ಪಾಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿತ್ತು. ಗಣೇಶ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅ.19 ರಂದು ಮುಂಜಾನೆ 2:17ಕ್ಕೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 86/2026 ಕಲಂ 281, 125(a), 106(1) BNS ರಂತೆ ಪ್ರಕರಣ ದಾಖಲಾಗಿದೆ.