Home Latest ನವೆಂಬರ್ ಅಂತ್ಯಕ್ಕೆ ತೆರೆಗೆ ಬರಲಿದೆ “ಕಲ್ಯಾಣಿ” ಚಿತ್ರ – ಉಡುಪಿಯಲ್ಲಿ ಸುದ್ದಿಗೋಷ್ಠಿ…!!

ನವೆಂಬರ್ ಅಂತ್ಯಕ್ಕೆ ತೆರೆಗೆ ಬರಲಿದೆ “ಕಲ್ಯಾಣಿ” ಚಿತ್ರ – ಉಡುಪಿಯಲ್ಲಿ ಸುದ್ದಿಗೋಷ್ಠಿ…!!

ಉಡುಪಿ: ರಂಗಭೂಮಿ ಕಲಾವಿದರೇ ಬಹುತೇಕ ಸೇರಿ ಅಭಿನಯಿಸಿರುವ ‘ಕಲ್ಯಾಣಿ’ ಚಲನಚಿತ್ರ ಇದೇ ನವೆಂಬರ್ ಅಂತ್ಯದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಉಡುಪಿ ಪತ್ರಕರ್ತರ ಸಂಘದಲ್ಲಿ ಅ.23 ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಲಾಯಿತು.

ಆರ್.ಕೆ. ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಕುಮಾರಸ್ವಾಮಿ ಆರ್ ಅವರು ಚಿತ್ರವನ್ನು ನಿರ್ಮಿಸಿದ್ದು, ಬಿ.ಎಂ. ಗಿರಿರಾಜ್ ನಿರ್ದೇಶನ ಮಾಡಿದ್ದಾರೆ. ಬಸವರೆಡ್ಡಿ ಕಥೆ ಬರೆದಿದ್ದು, ಪ್ರಶಾಂತ ಸಾಗರ ಛಾಯಾಗ್ರಹಣ, ಅರ್ಜುನ ಕಿಟ್ಟು ಸಂಕಲನ, ಭರತ್ ಬಿ.ಜೆ ಸಂಗೀತವಿದೆ. ದ.ರಾ.ಬೇಂದ್ರೆ, ವಿಜಯ್ ಈಶ್ವರ್, ಅಲೋಕ್ (ಆಲ್ ಓಕೆ) ಸಾಹಿತ್ಯ ರಚಿಸಿದ್ದಾರೆ.

ಈ ಚಿತ್ರದ ಮೂಲಕ ಸಾಮ್ರಾಟ್ ಶೆಟ್ಟಿ ನಾಯಕನಾಗಿ ಮತ್ತು ಸಿಮ್ರನ್ ಕೌರ್ ನಾಯಕಿಯಾಗಿ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗುತ್ತಿದ್ದಾರೆ. ಜೊತೆಗೆ ರಾಹುಲ್ ಜೇಟ್ಲಿ, ಶಮಂತರಾವ್, ಯಮುನಾ ಶ್ರೀನಿಧಿ, ಪಿ.ಡಿ. ಸತೀಶ್ ಚಂದ್ರ, ಸಂದೀಪ್ ಶೆಟ್ಟಿಗಾರ್ ಉಡುಪಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಕಥಾಹಂದರ: ಕನ್ನಡ ಮತ್ತು ಹಿಂದಿ ಸಂಸ್ಕೃತಿಯ ನಡುವಿನ ಸಂಘರ್ಷ, ಒಡನಾಟ, ಬಾಂಧವ್ಯ, ಪ್ರೀತಿ, ಸ್ನೇಹದ ಸುತ್ತ ಹೆಣೆದ ಕಥೆ ‘ಕಲ್ಯಾಣಿ’ ಚಿತ್ರದಲ್ಲಿದೆ. ಬಸವರೆಡ್ಡಿ ಬರೆದ ಕಥೆಯನ್ನು ಇಂದಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ತೆರೆಮೇಲೆ ತರಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಪೂರ್ಣಗೊಂಡಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ ಎಂದು ನಿರ್ದೇಶಕರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನಿರ್ಮಾಪಕ ಕುಮಾರಸ್ವಾಮಿ, ನಿರ್ದೇಶಕ ಬಿ.ಎಂ. ಗಿರಿರಾಜ್, ನಾಯಕ ಸಾಮ್ರಾಟ್ ಶೆಟ್ಟಿ, ಸಂದೀಪ್ ಶೆಟ್ಟಿಗಾರ್ ಉಡುಪಿ, ಕಾರ್ತಿಕ್ ಹಾಗೂ ಇತರ ಕಲಾವಿದರು ಉಪಸ್ಥಿತರಿದ್ದರು.