Home Latest ಪುಟಾಣಿ ಮಕ್ಕಳಿಗೆ ಪರಿಸರ ಜಾಗೃತಿ : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಗಿಡ ನೆಡುವ ಅಭಿಯಾನ

ಪುಟಾಣಿ ಮಕ್ಕಳಿಗೆ ಪರಿಸರ ಜಾಗೃತಿ : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ ಗಿಡ ನೆಡುವ ಅಭಿಯಾನ

ಉಡುಪಿ : ಬಿಜೆಪಿ ನಗರ ಅಲ್ಪ ಸಂಖ್ಯಾತ ಮೋರ್ಚಾ ಉಡುಪಿ ನಗರ ವತಿಯಿಂದ ದಿನಾಂಕ 13 ಜೂನ್ 2026 ರಂದು ಮೂಡು ಪೆರಂಪಲ್ಲಿ ವಾರ್ಡ್ ಅಂಗನವಾಡಿ ಶಾಲಾ ವಠಾರದಲ್ಲಿ ಪುಟಾಣಿ ಮಕ್ಕಳೊಂದಿಗೆ ನಗರ ಅಲ್ಪ ಸಂಖ್ಯಾತ ಮೋರ್ಚಾದ ವತಿಯಿಂದ,ನಮ್ಮ ನೆಚ್ಚಿನ ಜನಪ್ರಿಯ ಶಾಸಕರಾದ ಶ್ರೀ ಯಶಪಾಲ್ ಸುವರ್ಣರವರ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ನಗರ ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾದ ಡೇನಿಸ್ ಮಸ್ಕ್ಯಾರೆನ್ಹಸ್, ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾದ ಶೆರ್ಲಿನ್ ಮಸ್ಕ್ಯಾರೆನ್ಹಸ್ ಮತ್ತು ಶೇಖ್ ಫಯಾಜ್, ಮೋರ್ಚಾದ ಉಫಾಧ್ಯಕ್ಷರುಗಳಾದ ಅಬ್ದುಲ್ ಖಾದರ್, ಮಾತಾಯಿಸ್ ಮಸ್ಕ್ಯಾರೆನ್ಹಸ್, ಕೋಶಧಿಕಾರಿಯಾದ ಲಿಲ್ಲಿ ಮಸ್ಕ್ಯಾರೆನ್ಹಸ್, ಪಧಾಧಿಕಾರಿಗಳಾದ ವಿನ್ನಿ, ಇಬಾ, ಲೀಡಯ, ರಾಫಯಲ್, ಸೋಹಲ್, ಮಿಲ್ಟೊನ್, ವಾಲ್ಟರ್, ಅಶೋಕ್, ಜಾರ್ಜ್, ಲಾನ್ಸಿ, ನೆಲ್ಸನ್ ಹಾಗೂ ಪಕ್ಷದ ಪ್ರಮುಖರಾದ ಬಾಲಕೃಷ್ಣ ಆಚಾರ್ಯ, ಪ್ರಶಾಂತ್ ಭಟ್, ಶಂಕರ್ ಕುಲಾಲ್, ಸುಮಾ ಆರ್ ಅಮೀನ್, ಉಲ್ಲಾಸ್ ದೇವಾಡಿಗ, ಗಣಪತಿ ಭಟ್, ಯಶೋಧರ ಅಮೀನ್,ಲೀನಾ ಕೆ ಲ್,ರತ್ನಕರ್ ಸಾಲಿಯಾನ್, ಉಮೇಶ್, ಜಯಂತ್,ವಿಜಯ್ ಹಾಗೂ ಪಕ್ಷದ ಕಾರ್ಯಕರ್ತಬಂಧುಗಳು ನಮ್ಮೊಂದಿಗೆ ಉಪಸ್ಥಿತರಿದ್ದರು.