ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಪರ್ಸ್ ನಲ್ಲಿದ್ದ ಹಣ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಕೇರಳದ ತ್ರಿಶೂರ್ ನಿವಾಸಿ ನಿಮಿಶಾ ಎಂಬವರ ಪರ್ಸ್ ನಲ್ಲಿದ್ದ ಹಣ ಕಳ್ಳತನವಾಗಿದೆ.
ಈ ಘಟನೆ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ದಿನಾಂಕ 04/07/2026 ರಂದು ಪಿರ್ಯಾದಿದಾರರಾದ ನಿಮಿಶಾ (40),ತ್ರಿಶೂರು ಜಿಲ್ಲೆ ಕೇರಳ ರವರು ಗಂಡ ಪ್ರಜೋಶ್ ರೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇವರ ದರ್ಶನ ಮಾಡುವ ಬಗ್ಗೆ ಕೊಲ್ಲೂರಿಗೆ ಬಂದು ವಾಸ್ತವ್ಯ ಮಾಡಿದ್ದು, ದಿನಾಂಕ 05/07/2026 ರಂದು ಆ ಬಳಿಕ ಸಂಜೆ 6:00 ಗಂಟೆ ಸಮಯಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ದೇವಸ್ಥಾನದ ಒಳಗೆ ದೇವರ ದರ್ಶನ ಮಾಡಿ ದೇವಸ್ಥಾನದ ಹೊರಾಂಗಣಕ್ಕೆ ಬಂದಾಗ ಸುಮಾರು 8:20 ಗಂಟೆ ಸಮಯಕ್ಕೆ ಪಿರ್ಯಾದಿದಾರರು ತನ್ನ ಬಳಿ ಇದ್ದ ಕಂದು ಬಣ್ಣದ ವ್ಯಾನಿಟಿ ಬ್ಯಾಗ್ ನೋಡಿದಾಗ ಬ್ಯಾಗ್ ನ ಜಿಪ್ ತೆರೆದುಕೊಂಡಿದ್ದು ನೋಡಿದಾಗ ಬ್ಯಾಗ್ ನ ಒಳಗಿದ್ದ 80,000/- ರೂಪಾಯಿಯಷ್ಟು ಹಣವಿದ್ದ ಪರ್ಸ್ ಇಲ್ಲದೇ ಇರುವುದು ಕಂಡು ಬಂದಿದ್ದು, ಈ ಬಗ್ಗೆ ದೇವಸ್ಥಾನದ ಪರಿಸರದಲ್ಲಿ ಹುಡುಕಾಡಿದಲ್ಲಿ ಯಾವುದೇ ಮಾಹಿತಿ ದೊರೆಯದೇ ಇದ್ದು, ದಿನಾಂಕ 05/07/2026 ರಂದು ಸಂಜೆ 6:00 ಗಂಟೆಯಿಂದ ಸಂಜೆ 8:20 ಗಂಟೆಯ ನಡುವಿನ ಅವಧಿಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಒಳಗೆ ದೇವರ ದರ್ಶನ ಮಾಡಿ ಹೊರಗೆ ಬರುವ ನಡುವಿನ ಅವಧಿಯಲ್ಲಿ ಪಿರ್ಯಾದಿದಾರರ ಕಂದು ಬಣ್ಣದ ವ್ಯಾನಿಟಿ ಬ್ಯಾಗ್ ನ ಒಳಗಿದ್ದ ಪರ್ಸ್‌ನಲ್ಲಿದ್ದ 80,000/- ರೂಪಾಯಿ ಹಣವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ.ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2026 ಕಲಂ : 303(2) BNS ರಂತೆ ಪ್ರಕರಣ ದಾಖಲಾಗಿರುತ್ತದೆ.





