Home Latest ₹ 1.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಕಲ್ಯಾಣಪುರ ನಿಡಂಬಳ್ಳಿ ರಸ್ತೆ ಕಾಮಗಾರಿ ಶಾಸಕ ಯಶ್ ಪಾಲ್...

₹ 1.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಕಲ್ಯಾಣಪುರ ನಿಡಂಬಳ್ಳಿ ರಸ್ತೆ ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟನೆ…!!

ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಲ್ಟರ್ ನಜರೆತ್ ಮನೆಯಿಂದ ನಿಡಂಬಳ್ಳಿ ನಾಗೇಶ್ ಸಾಲ್ಯಾನ್ ಮನೆವರೆಗೆ ಸುಮಾರು 1.40 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ರಸ್ತೆ ಕಾಮಗಾರಿಯ ಉದ್ಘಾಟನೆಯನ್ನು ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ನೆರವೇರಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಕಲ್ಯಾಣಪುರ ನಿಡಂಬಳ್ಳಿ ಭಾಗದ ಜನತೆಯ ಬಹುದಿನದ ಬೇಡಿಕೆಯಂತೆ ಬಹಳ ವರ್ಷಗಳಿಂದ ರಸ್ತೆ ತೀರಾ ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸುಮಾರು 1.40 ಕೋಟಿ ಅನುದಾನ ಒದಗಿಸಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಸರ್ಕಾರದ ಸೀಮಿತ ಅನುದಾನದ ನಡುವೆಯೂ ಕಲ್ಯಾಣಪುರ ಗ್ರಾಮದ ರಸ್ತೆಗಳ ಅಭಿವೃದ್ಧಿಗೆ ಗರಿಷ್ಠ ಮೊತ್ತವನ್ನು ಒದಗಿಸಿದ್ದು, ಮುಂದಿನ ದಿನಗಳಲ್ಲಿಯೂ ಕಲ್ಯಾಣಪುರ ಗ್ರಾಮದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾಗರಾಜ ಕುಂದರ್, ಕೃಷ್ಣ ದೇವಾಡಿಗ, ಸತೀಶ್ ನಾಯ್ಕ್, ಸುನೀತಾ ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಲತಾ ಕಿಶೋರ್, ಉದಯ ಕುಮಾರ್, ನವೀನ್ ಕಾಂಚನ್, ವಿಶು ಕುಮಾರ್, ಅನಿತಾ ನಾಯ್ಕ್, ರತ್ನ ಉಚ್ಚಿಲ್, ಕವಿತಾ ಮೇಸ್ತ, ಬೆನೆಡಿಕ್ಟ್ ಮೆನೇಜಸ್, ಜಯಂತಿ ಕಾವೇರಿಜಿಡ್ಡ, ಬಿಲ್ಲವ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಕುಮಾರ್ ,ತೋನ್ಸೆ ಗರಡಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ದಿನೇಶ್ ಜತ್ತನ್, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷರಾದ ಅಜಿತ್ ಕೊಡವೂರು, ನಗರ ಅಧ್ಯಕ್ಷರಾದ ಸುನೀಲ್ ನೇಜಾರ್, ಸ್ಥಳೀಯ ಪ್ರಮುಖರಾದ ಅಪ್ಪು ಜತ್ತನ್, ಕಿಶೋರ್, ದಿನಕರ ಶೆಟ್ಟಿ, ಶರತ್ ಕುಮಾರ್, ದಿನಕರ್ ಮಾಸ್ಟರ್, ಶರತ್ ಕಲ್ಯಾಣಪುರ್, ರವಿ ಕರ್ಕೇರ , ಕೇಶವ್ ಉಚ್ಚಿಲ್, ಸುಧೀರ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.