Home Crime ಉಡುಪಿ: ಯುವತಿ ನಾಪತ್ತೆ : ಪ್ರಕರಣ ದಾಖಲು…!!

ಉಡುಪಿ: ಯುವತಿ ನಾಪತ್ತೆ : ಪ್ರಕರಣ ದಾಖಲು…!!

ಉಡುಪಿ: ಉಡುಪಿ ತಾಲೂಕಿನ ಕೊಡವೂರು ಗ್ರಾಮದ ವಡಭಾಂಡೇಶ್ವರ ದೇವಸ್ಥಾನ ಬಳಿ ವಾಸವಾಗಿದ್ದ ದೀಕ್ಷಾ(20) ಎಂಬ ಯುವತಿಯು ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜುಲೈ 21 ರಂದು ಕೆಲಸ ಮಾಡಿಕೊಂಡಿದ್ದ ಬೇಕರಿಯಲ್ಲಿ ಶೌಚಾಲಯಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವರು ಕೆಲಸಕ್ಕೂ ಮರಳಿ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿರುತ್ತಾರೆ.

5 ಅಡಿ ಎತ್ತರ, ಬಿಳಿ ಮೈಬಣ್ಣ ಹೊಂದಿದ್ದು ಕನ್ನಡ ಹಾಗೂ ತುಳು ಭಾಷೆ ಮಾತಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಲ್ಪೆ ಠಾಣಾ ದೂ.ಸಂ: 0820-2537999, ಮಲ್ಪೆ ಪಿ.ಎಸ್.ಐ ದೂ.ಸಂ: 9480805447, ಮಲ್ಪೆ ವೃತ್ತ ನಿರೀಕ್ಷಕರ ದೂ.ಸಂ: 9480805430 ಅನ್ನು ಸಂಪರ್ಕಿಸುವಂತೆ ಮಲ್ಪೆ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.