ಉಡುಪಿ: ಬೈಂದೂರು ತಾಲೂಕಿನ ಗೊಳಿಹೋಳೆ ಗ್ರಾಮದ ಬಡ್ಕಿ ಎಂಬಲ್ಲಿ ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪುಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಆಲೂರು ಗ್ರಾಮದ ಮನೋಜ ಮೊಗವೀರ(43) ಬಂಧಿತ ಆರೋಪಿ.
ವಿಚಾರಣೆ ವೇಳೆ ಸರಕಾರಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಸುಮಾರು 60-40 ಉದ್ದ ಅಗಲದ ವಿಸ್ತೀರ್ಣ ಜಾಗದಲ್ಲಿ ನೆಲದಿಂದ ಸುಮಾರು 3 ಅಡಿ ಅಳದಲ್ಲಿ ಸುಮಾರು 60 ಅಡಿ ಉದ್ದ ಮತ್ತು 40 ಅಡಿ ಅಗಲದಲ್ಲಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಕಂಡುಬಂದಿದೆ.
ಕಲ್ಲು ಕಟ್ಟಿಂಗ್ ಮಾಡುವ ಕೆಂಪು ಬಣ್ಣದ ಸಣ್ಣ ಟಿಲ್ಲರ್ -1 ಅಂದಾಜು ಮೌಲ್ಯ 35,000/- ರೂ., ಕಬ್ಬಿಣದ ಮೊಳೆಗಳು – 30 ಅಂದಾಜು ಮೌಲ್ಯ 400/- ರೂ. ಮತ್ತು ಕಬ್ಬಿಣದ ಸುತ್ತಿಗೆ -1 ಅಂದಾಜು ಮೌಲ್ಯ 100 ರೂ. ಅಂದಾಜು 35,500 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎರಡು ಅಡಿ ಆಳದಷ್ಟು 2 ಹಾಸ್ ಸುಮಾರು 300 ಕೆಂಪು ಕಲ್ಲು ಕಳವು ಮಾಡಿ ಮಾರಾಟ ಮಾಡಿರುವುದಾಗಿ ಮನೋಜ ಮೊಗವೀರ ಒಪ್ಪಿಕೊಂಡಿದ್ದಾರೆ. ಅಲ್ಲದೇ ಅದೇ ಸ್ಥಳದಲ್ಲಿ ಇನ್ನು ಕೆಂಪು ಕಲ್ಲುಗಳನ್ನು ತೆಗೆಯಲು ಪ್ರಯತ್ನ ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.